ಚಿತ್ರದುರ್ಗ: ಮೊದಲನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಆರಂಭವಾಗಿದ್ದು, ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮತದಾನ ಮಾಡಿದರು.
ಚಿತ್ರದುರ್ಗ ತಾಲೂಕಿನ ಮಠದಕುರುಬರಹಟ್ಟಿಯ ಸಂಖ್ಯೆ 180ರ ಮತಗಟ್ಟೆಗೆ ಬಂದ ಶ್ರೀಗಳು ಮತದಾನ ಮಾಡಿದರು. ಶ್ರೀಗಳಿಗೆ ಚುನಾವಣಾ ಸಿಬ್ಬಂದಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಮತಗಟ್ಟೆಯ ಒಳಗೆ ಕಳುಹಿಸಿದರು.
ಓದಿ:ಬೆಳಗಾವಿಯಲ್ಲಿ ಹಕ್ಕು ಚಲಾಯಿಸಿ ಗಮನ ಸೆಳೆದ ವೃದ್ಧ ದಂಪತಿ
ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ.. ಕೊರೊನಾ ತಡೆಗೆ ನಿಯಮಗಳ ಪಾಲನೆಯೊಂದಿಗೆ ಮತದಾನ ಮಾಡಬೇಕು. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಪ್ರಜೆಗಳ ಪರಮಾಧಿಕಾರ. ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.