ಚಿತ್ರದುರ್ಗ: ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾದ ಹಿನ್ನಲೆ ಹನಿ ನೀರಿಗೂ ಪ್ರಾಣಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಬಿಸಿಲಿಗೆ ಬಸವಳಿದ ಕೋತಿಯೊಂದು ಕುಡಿಯಲು ನೀರಿಗೆ ಪರದಾಡಿ ಬಿಸ್ಲೇರಿ ಬಾಟಲ್ ನೀರಿನ ಮೊರೆ ಹೋದ ಘಟನೆ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ.
ಬಿಸಿಲಿನಿಂದ ಬಸವಳಿದ ಕೋತಿ ಚಳ್ಳಕೆರೆ ನಗರದಲ್ಲಿ ನಡೆಯುತಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಬಿಸ್ಲೇರಿ ಹೊತ್ತೊಯ್ದು ನೀರು ಕುಡಿಯುವ ಮೂಲಕ ದಾಹ ತಣಿಸಿಕೊಂಡಿದೆ. ಕೋತಿ ಬಿಸ್ಲೇರಿ ಬಾಟಲ್‌ನಲ್ಲಿ ನೀರು ಕುಡಿಯುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.