ETV Bharat / state

ಪಕ್ಷದ ವಿರುದ್ಧ ನಿಂತವರು ಪಕ್ಷದವರಲ್ಲ: ವೈ.ಎ.ನಾರಾಯಣಸ್ವಾಮಿ ಸ್ಪಷ್ಟನೆ - ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಸಹಜ. ಆದರೆ, ಪಕ್ಷ ಒಬ್ಬರನ್ನು ಮಾತ್ರ ಅಭ್ಯರ್ಥಿಯನ್ನಾಗಿ ಮಾಡಲು ಸಾಧ್ಯ. ಪಕ್ಷದ ವಿರುದ್ಧ ನಿಂತವರು ಪಕ್ಷದವರಲ್ಲ ಎಂದು ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ ಹೇಳಿದ್ದಾರೆ.

MLC YA Narayanaswamy statement
ಪಕ್ಷದ ವಿರುದ್ಧ ನಿಂತವರು ಪಕ್ಷದವರಲ್ಲ : ವೈ.ಎ.ನಾರಾಯಣಸ್ವಾಮಿ
author img

By

Published : Oct 17, 2020, 3:09 PM IST

ಚಿತ್ರದುರ್ಗ: ನಮ್ಮ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ಆದರೆ, ಪಕ್ಷದ ವಿರುದ್ಧ ನಿಂತವರು ಪಕ್ಷದವರಲ್ಲ. ಬಿಜೆಪಿ ಅಭ್ಯರ್ಥಿಗೆ ನೇರ ಎದುರಾಳಿ ಆಗುವುದು ಅವರ ಭ್ರಮೆ ಎಂದು ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಅವರಿಗೆ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ ಟಾಂಗ್​ ನೀಡಿದ್ದಾರೆ.

ಪಕ್ಷದ ವಿರುದ್ಧ ನಿಂತವರು ಪಕ್ಷದವರಲ್ಲ : ವೈ.ಎ.ನಾರಾಯಣಸ್ವಾಮಿ

ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಬಿಜೆಪಿಗೆ ತಲೆಬಿಸಿಯಾಗಿ ಪರಿಣಮಿಸಿದೆ. ಇಂದು ಹಿರಿಯೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ‌ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಗೆ ಬಿಜೆಪಿಯ ಎಲ್ಲ ನಾಯಕರು ಕೂಡ ಹಾಜರಾಗಿದ್ರು. ಆದರೆ, ಶಾಸಕಿ ಪೂರ್ಣಿಮಾ ಮಾತ್ರ ಗೈರಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ, ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಸಹಜ. ಆದರೆ, ಪಕ್ಷ ಒಬ್ಬರನ್ನು ಮಾತ್ರ ಅಭ್ಯರ್ಥಿಯನ್ನಾಗಿ ಮಾಡಲು ಸಾಧ್ಯ. ಸಿಎಂ ಯಡಿಯೂರಪ್ಪ ಹಾಗೂ ನಳೀನ್​ ಕುಮಾರ್​ ಅವರು ಚಿದಾನಂದ ಗೌಡ ಅಭ್ಯರ್ಥಿ ಎಂದು ಆಯ್ಕೆ ಮಾಡಿದ್ದಾರೆ. ಸ್ಥಳೀಯ ಶಾಸಕರಿಗೆ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಕರೆದಿದ್ದೇವೆ, ಅವರು ಬರಬಹುದು. ನಮ್ಮ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ಆದರೆ, ಪಕ್ಷದ ವಿರುದ್ಧ ನಿಂತವರು ಪಕ್ಷದವರಲ್ಲ. ಬಿಜೆಪಿ ಅಭ್ಯರ್ಥಿಗೆ ನೇರ ಎದುರಾಳಿ ಆಗುವುದು ಅವರ ಭ್ರಮೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.