ETV Bharat / state

ನಿಗಮ ಮಂಡಳಿ‌ ಅಧ್ಯಕ್ಷರಾಗಿ ನೇಮಿಸಿ ನನಗೆ ಅವಮಾನ: ಸಿಎಂ ವಿರುದ್ಧ ಶಾಸಕ‌ ತಿಪ್ಪಾರೆಡ್ಡಿ ಮುನಿಸು

ರಾಜಕೀಯಕ್ಕೆ ಬಂದಿದ್ದೇ ಮೊದಲನೇ ತಪ್ಪು ಎಂಬ ಭಾವನೆ ಮೂಡುತ್ತಿದೆ ಎಂದು ಶಾಸಕ‌ ತಿಪ್ಪಾರೆಡ್ಡಿ ಹೇಳಿದ್ದಾರೆ.

ಶಾಸಕ‌ ತಿಪ್ಪಾರೆಡ್ಡಿ
ಶಾಸಕ‌ ತಿಪ್ಪಾರೆಡ್ಡಿ
author img

By

Published : Jul 27, 2020, 10:33 PM IST

ಚಿತ್ರದುರ್ಗ: ನಿಗಮ, ಮಂಡಳಿ‌ ಅಧ್ಯಕ್ಷರಾಗಿ ನೇಮಿಸಿ ಸಿಎಂ ಯಡಿಯೂರಪ್ಪ ನನಗೆ ಅವಮಾನ ಮಾಡಿದ್ದಾರೆ. 1998ರಲ್ಲೇ ನಾನು ಹೌಸಿಂಗ್ ಬೋರ್ಡ್ ಅಧ್ಯಕ್ಷನಾಗಿದ್ದೆ. ಅದರೆ ಯಾವ ಆಧಾರದ ಮೇಲೆ ದೇವರಾಜ‌ ಅರಸು‌ ನಿಗಮ‌ ಅಧ್ಯಕ್ಷಗಿರಿ ನೀಡಿದ್ದಾರೋ ಗೊತ್ತಿಲ್ಲ ಎಂದು ಶಾಸಕ‌ ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಸಿಎಂ ವಿರುದ್ಧ ಶಾಸಕ‌ ತಿಪ್ಪಾರೆಡ್ಡಿ ಮುನಿಸು

ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ಆರು ಬಾರಿ ಗೆದ್ದಿದ್ದೇನೆ. ಕಳೆದ 40-50 ವರ್ಷದಿಂದ ರಾಜಕೀಯದಲ್ಲಿದ್ದೇನೆ. 6 ಬಾರಿ ಶಾಸಕನಾಗಿ ಗೆದ್ದಿದ್ದೇನೆಂಬುದು ಬಿಟ್ಟರೆ ಹೆಚ್ಚೇನು ಹೇಳಿಕೊಳ್ಳುವ ಅಗತ್ಯವಿಲ್ಲ. ರಾಜಕೀಯಕ್ಕೆ ಬಂದಿದ್ದೇ ಮೊದಲನೇ ತಪ್ಪು ಎಂಬ ಭಾವನೆ ಮೂಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಬಿಎಸ್‌ವೈ ನನ್ನ ಬಗ್ಗೆ ಏನು ಭಾವನೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಇನ್ನೆರಡೂವರೆ ವರ್ಷ ಕ್ಷೇತ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಕಟೀಲ್ ಹಾಗೂ ಬಿಎಸ್‌ವೈ ಜತೆ ಶಾಸಕರಾಗಿರುವುದೇ ಗೌರವ. ಅದರೆ ಪಕ್ಷದ ಆದೇಶದಂತೆ ಮುಂದೆ ಕಾರ್ಯ ನಿರ್ವಹಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.