ETV Bharat / state

ಸಿಡಿ ಇದ್ರೆ ಬಿಡುಗಡೆ ಮಾಡಲಿ.. ಯೋಗೇಶ್ವರಗೆ ಸಾಲ ನೀಡಿಲ್ಲ; ಸಚಿವ ಎಂಟಿಬಿ ನಾಗರಾಜ್

ಸಿಡಿ ಇದೆ ಎಂದು ಬಿಜೆಪಿ ನಾಯಕರು ಅಥವಾ ಬೇರೆ ಪಕ್ಷದ ನಾಯಕರು ಹೇಳುತ್ತಾರೋ ಗೊತ್ತಿಲ್ಲ. ಸಿಡಿ ಇದ್ರೆ ಬಿಡುಗಡೆ ಮಾಡಲಿ, ಸತ್ಯಾಂಶ ಎಲ್ಲರಿಗೂ ತಿಳಿಯಲಿ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.

MTB nagaraj
ಸಚಿವ ಎಂಟಿಬಿ
author img

By

Published : Jan 15, 2021, 11:38 AM IST

Updated : Jan 15, 2021, 11:59 AM IST

ಚಿತ್ರದುರ್ಗ: ಶಾಸಕರ ಬಳಿ ಯಾವ ಸಿಡಿ ಇದೆಯೋ ಇಲ್ಲ ಗೊತ್ತಿಲ್ಲ, ಅಂತೆ-ಕಂತೆಗಳನ್ನೇ ಮೀಡಿಯಾಗಳ ಮುಂದೆ ಹೇಳಿದ್ದಾರೆಂದು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಸಚಿವರಾದ ಮೇಲೆ ಮೊದಲ ಬಾರಿಗೆ ಕೋಟೆನಾಡಿಗೆ ಆಗಮಿಸಿ ಮಾತಾನಾಡಿದ ಸಚಿವ ಎಂಟಿಬಿ, ಸಿಡಿ ಇದೆ ಎಂದು ಬಿಜೆಪಿ ನಾಯಕರು ಅಥವಾ ಬೇರೆ ಪಕ್ಷದ ನಾಯಕರು ಹೇಳುತ್ತಾರೋ ಗೊತ್ತಿಲ್ಲ. ಸಿಡಿ ಇದ್ರೆ ಬಿಡುಗಡೆ ಮಾಡಲಿ, ಸತ್ಯಾಂಶ ಎಲ್ಲರಿಗೂ ತಿಳಿಯಲಿ. ಸಿಡಿ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಪ್ರಯೋಜನವಿಲ್ಲ ಎಂದರು.

ಸಚಿವ ಎಂಟಿಬಿ ನಾಗರಾಜ್

ಸಿಡಿ ಹೆಸರು ಹೇಳಿಕೊಂಡು ಮಂತ್ರಿಯಾದವರು, ಸಿಡಿ ಇಟ್ಕೊಂಡು ಬೆದರಿಕೆ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಇನ್ನು ಸಚಿವ ಯೋಗೇಶ್ವರ ನನ್ನ ಬಳಿ ಆಸ್ತಿ ಅಡವಿಟ್ಟು ಸಾಲ ಪಡೆದುಕೊಂಡಿಲ್ಲ. ಜಾರಕಿಹೊಳಿ ಯಾವ ಕಾರಣಕ್ಕೆ ಹೀಗೆ ಹೇಳುತ್ತೀರಿ ಎಂದು ಕೇಳಿದ್ದೇನೆ. ಸತ್ಯಾಸತ್ಯತೆ ಇದ್ದರೆ ಮಾತಾಡಿ ಎಂದು ಹೇಳಿರುವೆ ಎಂದರು.

ಇದನ್ನು ಓದಿ: ಯಡಿಯೂರಪ್ಪಗೇ ಅಧಿಕಾರದ ವ್ಯಾಮೋಹ ಇರುವಾಗ ನನಗಿದ್ದರೆ ತಪ್ಪೇನು?: ಹಳ್ಳಿಹಕ್ಕಿ ಆಕ್ರೋಶ

ಮೂರು ದಿನಗಳಲ್ಲಿ ಖಾತೆ ಹಂಚಿಕೆ ನಡೆಯಲಿದೆ. ಯಾವ ಖಾತೆ ಕೊಟ್ಟರೂ ನಿಭಾಯಿಸುವೆ. ಯಾರಿಗೆ ಯಾವ ಖಾತೆ ನೀಡುತ್ತಾರೋ ಗೊತ್ತಿಲ್ಲ. 17 ಶಾಸಕರು ಒಟ್ಟಾಗಿದ್ದೇವೆ. ಮುಂದಿನ ದಿನಗಳಲ್ಲಿ ಮುನಿರತ್ನ, ವಿಶ್ವನಾಥ ಸೇರಿ ಉಳಿದವರಿಗೂ ಸಚಿವ ಸ್ಥಾನ ಕೊಡ್ತಾರೆ ಎಂದರು.

ಸಚಿವ ಸ್ಥಾನ ಹಂಚಿಕೆ ಬಳಿಕ ಅಸಮಾಧಾನ ಆಗುವುದು ಸಹಜ. ಶಾಸಕ ಯತ್ನಾಳ ಬಳಿ ಸಿಡಿ ಇದ್ರೆ ಬಿಡುಗಡೆ ಮಾಡಲಿ ಎಂದು ಹೇಳಿದರು.

Last Updated : Jan 15, 2021, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.