ಚಿತ್ರದುರ್ಗ : ನಂಜನಗೂಡು ದೇವಸ್ಥಾನ ತೆರವಿನ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ತಪ್ಪುಗಳಾದಲ್ಲಿ ತಿದ್ದುಕೊಳ್ಳಬೇಕು ಅಂತಾ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕಾಗುತ್ತದೆ. ಗೊತ್ತೋ ಗೊತ್ತಿಲ್ಲದೆಯೋ ಆದೇಶ ಮಾಡಿದ್ದಾರೆ. ಮೈಸೂರು ಸಂಸದ ಪ್ರತಾಪ್ ಸಿಂಹ ಅದನ್ನು ವಿರೋಧಿಸುತ್ತಿದ್ದಾರೆ. ಇದು ಸಮಗ್ರವಾಗಿ ಚರ್ಚೆ ಆಗಬೇಕು ಎಂದರು.
ನಾವು ಯಾವತ್ತೂ ಡೋಂಗಿ ರಾಜಕಾರಣ ಮಾಡಿಲ್ಲ. ಮಾಡೋದೂ ಇಲ್ಲ. ನಾವು ಹಿಂದೂ ರಾಷ್ಟ್ರ ಕಟ್ಟಲು ಹೊರಟಿದ್ದೇವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಬಿಜೆಪಿ ಮತ್ತು ಸಂಘ ಪರಿವಾರ ಎರಡು ಒಟ್ಟೊಟ್ಟಿಗೆ ಸಾಗುತ್ತವೆ.
ಸಂಘ ಪರಿವಾರ ಮತ್ತು ಬಿಜೆಪಿ ಎರಡರದ್ದೂ ಒಂದೇ ಗುರಿ. ಅದು ಹಿಂದೂ ರಾಷ್ಟ್ರ ಕಟ್ಟಬೇಕೆಂಬುದು. ನಾವು ಬೇರೆ ಸಮಾಜ, ಧರ್ಮ ವಿರೋಧ ಮಾಡುವುದಿಲ್ಲ ಎಂದರು. 2023ಕ್ಕೆ ಬಿಜೆಪಿ, ಕಾಂಗ್ರೆಸ್ ನಮ್ಮ ಮನೆ ಬಾಗಿಲಿಗೆ ಬರಲಿದೆ ಎಂಬ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಹಿರಿಯರು ಯಾವಾಗಲೂ ಅದೇ ರಾಜಕಾರಣ ಮಾಡ್ತಿದ್ದಾರೆ.
ಯಾರು ಯಾರ ಮನೆಗೆ ಬರುತ್ತಾರೆ ಎಂಬುದಕ್ಕೆ 2023ರವರೆಗೆ ಕಾದು ನೊಡೋಣ ಎಂದು ಟಾಂಗ್ ನೀಡಿದರು. ಜಿಲ್ಲೆಯ ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ ಹೆಚ್ಚಳಗೊಂಡಿದೆ. ಹೀಗಾಗಿ, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.
ಓದಿ: 'ಕೈ'-ದಳ ವಿರೋಧದ ನಡುವೆಯೇ ಪರಿಷತ್‌ನಲ್ಲಿ ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ