ETV Bharat / state

ವಿಚಾರಣೆಗೆಂದು ಠಾಣೆಗೆ ಬಂದ ಆರೋಪಿ ಸಾವು.. ಹಿಂಸೆ ನೀಡಿ ಸಾಯಿಸಿದ್ದಾರೆಂದು ಪತ್ನಿ ಆರೋಪ

ಠಾಣೆಗೆ ಬರುತ್ತಿದ್ದಂತೆ ಶಿವಾಜಿರಾವ್ ಕುಸಿದು ಬಿದ್ದಿದ್ದಾನೆ. ಬಳಿಕ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಆದರೆ, ಆತ ಸಾವನ್ನಪ್ಪಿದ್ದಾನೆ ಎಂದು ಎಸ್​ಪಿ ಹೇಳುತ್ತಿದ್ದಾರೆ..

marijuana-case-accused-died-in-police-station-in-chitradurga
ವಿಚಾರಣೆಗೆಂದು ಠಾಣೆಗೆ ಬಂದ ಆರೋಪಿ ಸಾವು
author img

By

Published : Jan 13, 2021, 8:37 PM IST

ಚಿತ್ರದುರ್ಗ : ಗಾಂಜಾ ಸೇವನೆ ಪ್ರಕರಣ ಸಂಬಂಧ ವಿಚಾರಣೆಗೆಂದು ಪೊಲೀಸರು ವಶಕ್ಕೆ ಪಡೆದಿದ್ದ ವ್ಯಕ್ತಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆರೋಪಿ ಶಿವಾಜಿರಾವ್ ಎಂಬಾತನನ್ನು ಗಾಂಜಾ ಸೇವನೆ ಹಾಗೂ ಮಾರಾಟ ಆರೋಪದಡಿ ಪೊಲೀಸರು ನಿನ್ನೆ ಸಂಜೆ ವಶಕ್ಕೆ ಪಡೆದು ಚಿತ್ರದುರ್ಗ ನಗರ ಠಾಣೆಗೆ ಕರೆತಂದಿದ್ದಾರೆ.

ವಿಚಾರಣೆಯ ವೇಳೆ ಶಿವಾಜಿರಾವ್ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದಾಗ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮೃತನ ಪತ್ನಿ, ವಿಚಾರಣೆ ವೇಳೆ ಪೊಲೀಸರು ವಿಪರೀತ ಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಟುಂಬಸ್ಥರು ಹೇಳೋದೇನು? : ಮೃತ ಶಿವಾಜಿರಾವ್ ಗಾರೆ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಮಫ್ತಿಯಲ್ಲಿ ಮನೆಗೆ ಬಂದ ಇಬ್ಬರು ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡದೆ ವಿಚಾರಣೆ ಹೆಸರಿನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ ಬಳಿಕ ಲಾಕಪ್ ಡೆತ್ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಮೃತನ ಪತ್ನಿ ಗೀತಾಬಾಯಿ ಮನವಿ ಮಾಡಿದ್ದಾರೆ.

ಘಟನೆ ಕುರಿತು ಪೊಲೀಸರು ಮಾತು : ಮೃತ ಶಿವಾಜಿರಾವ್ ಗಾಂಜಾ ಮಾರಾಟ ಮಾಡುತ್ತಿದ್ದ. ಸೂಕ್ತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು 59 ಗ್ರಾಂ ಗಾಂಜಾ ಸಮೇತವಾಗಿ ಹಿಡಿದು ಠಾಣೆಗೆ ತಂದಿದ್ದರಂತೆ. ಠಾಣೆಗೆ ಬರುತ್ತಿದ್ದಂತೆ ಶಿವಾಜಿರಾವ್ ಕುಸಿದು ಬಿದ್ದಿದ್ದಾನೆ. ಬಳಿಕ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ‌. ಆದರೆ, ಆತ ಸಾವನ್ನಪ್ಪಿದ್ದಾನೆ ಎಂದು ಎಸ್​ಪಿ ಹೇಳುತ್ತಿದ್ದಾರೆ. ಆತನಿಗೆ ಸಿಬ್ಬಂದಿ ಹಲ್ಲೆ ಮಾಡಿಲ್ಲ. ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯುವವರೆಗಿನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆತನ ಪತ್ನಿಯ ಹೇಳಿಕೆ ಪ್ರಕಾರ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್​​​​ಪಿ ಜಿ. ರಾಧಿಕಾ ಹೇಳಿದ್ದಾರೆ.

ವಿಚಾರಣೆಗೆಂದು ಠಾಣೆಗೆ ಬಂದ ಆರೋಪಿ ಸಾವು

ಸದ್ಯ ಈ ಪ್ರಕರಣದ ತನಿಖೆಯನ್ನ ಸಿಐಡಿಗೆ ಒಪ್ಪಿಸಲಾಗಿದೆ. ಶೀಘ್ರವೇ ತನಿಖೆ ನಡೆಸಿದ ಸತ್ಯಾಂಶ ತಿಳಿಸಬೇಕಿದೆ.

ಇದನ್ನೂ ಓದಿ: ಗಂಡ ಬೇಕು ಗಂಡ... ಪತಿ ಮನೆ ಮುಂದೆ ಧರಣಿ ಕುಳಿತ ಪತ್ನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.