ETV Bharat / state

ಚಿತ್ರದುರ್ಗದಲ್ಲಿ ರಂಗೇರಿದ ಕಸಾಪ ಚುನಾವಣೆ: ಯಾರ ಪರ ಮತದಾರರ ಒಲವು?

author img

By

Published : Nov 21, 2021, 8:20 AM IST

Updated : Nov 21, 2021, 8:45 AM IST

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿ ನಾಲ್ವರು ಪ್ರಭಾವಿ ಪತ್ರಕರ್ತರು ಕಣದಲ್ಲಿರುವುದರಿಂದ ಚುನಾವಣೆ ಅಖಾಡ ರಂಗೇರಿದೆ.

ಕಣದಲ್ಲಿರುವ ಅಭ್ಯರ್ಥಿಗಳು
ಕಣದಲ್ಲಿರುವ ಅಭ್ಯರ್ಥಿಗಳು

ಚಿತ್ರದುರ್ಗ: ಇಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚಿಕ್ಕಮ್ಮನಹಳ್ಳಿ ಷಣ್ಮುಖ, ಕೆ.ಎಂ.ಶಿವಸ್ವಾಮಿ, ಮಾಲತೇಶ್ ಅರಸು ಹರ್ತಿಕೋಟೆ, ಕೊರ್ಲಕುಂಟೆ ತಿಪ್ಪೇಸ್ವಾಮಿ, ಗೌಡಿಹಳ್ಳಿ ರಾ.ಸು.ತಿಮ್ಮಯ್ಯ, ದೊಡ್ಡಮಲ್ಲಯ್ಯ, ಶೇಷಣಕುಮಾರ್ ಸೇರಿ 7 ಅಭ್ಯರ್ಥಿಗಳು ಕಣದಲ್ಲಿದ್ದು, ಕಸಾಪ (ಕನ್ನಡ ಸಾಹಿತ್ಯ ಪರಿಷತ್) ಸಾರಥಿಯಾಗಲು ಪೈಪೋಟಿ ನಡೆಸಲಿದ್ದಾರೆ.

ಈ ಬಾರಿ ನಾಲ್ವರು ಪ್ರಭಾವಿ ಪತ್ರಕರ್ತರು ಕಣದಲ್ಲಿದ್ದು ಚುನಾವಣೆ ಅಖಾಡ ರಂಗೇರಿದೆ. ಹಿರಿಯ ಪತ್ರಕರ್ತ ಚಿಕ್ಕಮ್ಮನಹಳ್ಳಿ ಷಣ್ಮುಖ, ಕೆ.ಎಂ.ಶಿವಸ್ವಾಮಿ, ಮಾಲತೇಶ್ ಅರಸು ಹರ್ತಿಕೋಟೆ, ಕೊರ್ಲಕುಂಟೆ ತಿಪ್ಪೇಸ್ವಾಮಿ ಪತ್ರಿಕಾರಂಗದಲ್ಲಿ ತಮ್ಮದೇ ಬಲ, ಬಳಗ ಹೊಂದಿರುವುದು ಚುನಾವಣೆ ಮತ್ತಷ್ಟು ಬಿರುಸುಗೊಳ್ಳಲು ಕಾರಣ.

ಇದಲ್ಲದೇ, ಶಿಕ್ಷಕ ಗೌಡಿಹಳ್ಳಿ ರಾ.ಸು.ತಿಮ್ಮಯ್ಯ, ಶೇಷಣಕುಮಾರ್ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್‍ನ ಕಳೆದ ವರ್ಷ ಜಿಲ್ಲಾಧ್ಯಕ್ಷರಾಗಿದ್ದ ದೊಡ್ಡಮಲ್ಲಯ್ಯ, ತಾಲ್ಲೂಕು ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ ಅವರು ಕಣದಲ್ಲಿ ಭರ್ಜರಿ ಕಸರತ್ತು ನಡೆಸಿದ್ದಾರೆ.

ಪತ್ರಿಕಾರಂಗದಲ್ಲಿ ವಿಶೇಷ ಛಾಪು, ಹಿರಿಮೆ ಬೆಳೆಸಿ, ನೀರಾವರಿ ಹೋರಾಟ ಸಮಿತಿ ಮತ್ತು ಹಲವಾರು ಸಾಮಾಜಿಕ ಹೋರಾಟಗಳಿಂದ ಗುರುತಿಸಿಕೊಂಡಿರುವ ಚಿಕ್ಕಪ್ಪನಹಳ್ಳಿ ಷಣ್ಮುಖ ಚುನಾವಣೆಯ ಕಣದಲ್ಲಿ ಇರುವುದು ಕೆಲವರಲ್ಲಿ ಆತಂಕ ಹುಟ್ಟು ಹಾಕಿದ್ದರೂ, ಚುನಾವಣೆ ಗೆಲ್ಲುವ ವಿಶ್ವಾಸ ಮಾತ್ರ ಕಡಿಮೆಗೊಳಿಸಿಲ್ಲ.

ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ನೇರ ನುಡಿ, ದಿಟ್ಟ ನಿರ್ಣಯಗಳಿಂದಲೇ ಹೆಸರಾದವರು. ಯಾವುದೇ ಪ್ರಶಸ್ತಿ, ಸನ್ಮಾನಗಳಿಗೆ ಕಿವಿಗೊಡದೆ ಕಾಯಕವೇ ಕೈಲಾಸ ಎಂಬ ತತ್ವಗಳನ್ನು ಅಳವಡಿಸಿಕೊಂಡ ಪ್ರಭಾವಿ ಪತ್ರಕರ್ತರು. ಅವರು ಈ ಬಾರಿ ಕಣದಲ್ಲಿ ಪ್ರಬಲವಾಗಿ ಉಳಿದಿರುವುದು ಕೆಲ ಅಭ್ಯರ್ಥಿಗಳ ಆತಂಕ ಉಂಟುಮಾಡಿದೆ.

ಮಾಲತೇಶ್ ಅರಸು, ಶಿವಸ್ವಾಮಿ, ಕೊರ್ಲಕುಂಟೆ ತಿಪ್ಪೇಸ್ವಾಮಿ, ತಿಮ್ಮಯ್ಯ ಕನ್ನಡ ಸೇವೆಗಳ ಮೂಲಕ ಕಣದಲ್ಲಿ ಗಟ್ಟಿತನ ಉಳಿಸಿದ್ದಾರೆ. ತಾಲೂಕಿನ ಗಡಿ ಗ್ರಾಮದ ಕೊರ್ಲಕುಂಟೆ ತಿಪ್ಪೇಸ್ವಾಮಿ ಕನ್ನಡ ಉಳಿವಿಗಾಗಿ ಪಾದಯಾತ್ರೆ ನಡೆಸುವ ಮೂಲಕ ಆಂಧ್ರದ ಗಡಿಯಲ್ಲಿ ಕನ್ನಡ ಗಟ್ಟಿಗೊಳಿಸಿದವರು. ಕನ್ನಡಪರ ಹೋರಾಟದಿಂದಲೇ ಜಿಲ್ಲೆಯಲ್ಲಿ ಗುರುತಿಸಿಕೊಂಡ ಇವರು ಈ ಭಾರಿಯ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂದು ಹಲವಾರು ಸಾಹಿತ್ಯ ದಿಗ್ಗಜರನ್ನು ಭೇಟಿ ಮಾಡಿ ಕನ್ನಡ ಸೇವೆ ಪರಿಚಯಿಸುವ ಮೂಲಕ ಪಾದರಸದಂತೆ ಮತದಾರರ ಮನವೊಲಿಕೆ ಕೆಲಸ ಮಾಡುತ್ತಿದ್ಧಾರೆ.

ಹಲವು ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಮಾಲತೇಶ್ ಅರಸ್ ಹರ್ತಿಕೋಟೆ ಸಹ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅತೀವ ಪೈಪೋಟಿ ನೀಡುವ ಅಭ್ಯರ್ಥಿ. ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಇವರ ಕನ್ನಡ ಸೇವೆ ಅನನ್ಯ ಎಂಬುದು ಕೆಲ ಮತದಾರರ ಮಾತು.

ಉಳಿದಂತೆ ಶಿಕ್ಷಣ ಕ್ಷೇತ್ರವಲ್ಲದೆ, ವಿಜ್ಞಾನ, ಸಾಮಾಜಿಕ ಕಳಕಳಿಯಲ್ಲಿ ಗುರುತಿಸಿಕೊಂಡ ಕೆ.ಎಂ.ಶಿವಸ್ವಾಮಿ ಹಲವು ವರ್ಷಗಳಿಂದ ಪತ್ರಿಕಾ ವೃತ್ತಿಯಲ್ಲಿ ಹೆಚ್ಚು ಗುರುತಿಸಿಕೊಂಡವರು. ಇದಲ್ಲದೆ, ವಿಜ್ಞಾನ ರಂಗದಲ್ಲೂ ಹಲವಾರು ಪ್ರಶಸ್ತಿಯ ಗರಿಮೆ ಇವರ ಮುಡಿಯಲ್ಲಿವೆ. ಇದನ್ನು ಹೊರತುಪಡಿಸಿ ಕಳೆದ ಅವಧಿಯ ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ತಾಲೂಕಿನಲ್ಲಿ ಯಾವುದೇ ಕನ್ನಡಪರ ಕೆಲಸಗಳು ಇವರ ಅವಧಿಯಲ್ಲಿ ನಡೆದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೂ ಮತದಾರರ ಮನದಲ್ಲಿ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಂತೆ ಕಾಣುತ್ತಿದೆ.

ಶಿಕ್ಷಕರಾಗಿ, ಕವಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗೌಡಿಹಳ್ಳಿ ರಾ.ಸು.ತಿಮ್ಮಯ್ಯ ಚುನಾವಣೆಯಲ್ಲಿ ಗೆಲುವು ನನ್ನದೇ ನಿಶ್ವಿತ ಎಂಬುವುದು ಅವರ ಮಾತು. ಮತದಾರರಲ್ಲಿ ಶೇ.70ರಷ್ಟು ಶಿಕ್ಷಕರೇ ಇರುವುದರಿಂದ ಈ ಬಾರಿ ಶಿಕ್ಷಕನಾದ ನನಗೆ ಹೆಚ್ಚಿನ ಒಲವು ತೋರಿಸುತ್ತಿದ್ಧಾರೆ. ಈಗಾಗಲೇ ಜಿಲ್ಲೆಯಾದ್ಯಂತ ಎರಡನೇ ಸುತ್ತಿನ ಪ್ರಚಾರ ನಡೆಸಿದ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಹೆಚ್ಚಿನ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಜಯಿಸುವ ವಿಶ್ವಾಸ ಹೊಂದಿದ್ದಾರೆ.

ಮತದಾರರ ವಿವರ

  • ಚಿತ್ರದುರ್ಗ-2498
  • ಚಳ್ಳಕೆರೆ(ನಾಯಕನಹಟ್ಟಿ)-2005
  • ಹಿರಿಯೂರು-546
  • ಹೊಳಲ್ಕೆರೆ-605
  • ಹೊಸದುರ್ಗ-605
  • ಮೊಳಕಾಲ್ಮೂರು-717
  • ಒಟ್ಟು 6815

ಇದನ್ನೂ ಓದಿ: ಅಕಾಲಿಕ ಮಳೆಗೆ ಕಂಗೆಟ್ಟ ರೈತಾಪಿ ವರ್ಗ; ಈವರೆಗೆ ಬೆಳೆ ಹಾನಿಗೆ ಸಿಕ್ಕ ಪರಿಹಾರವೆಷ್ಟು?

Last Updated : Nov 21, 2021, 8:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.