ಚಿತ್ರದುರ್ಗ : ಅನ್ನದಾತನಿಗಾಗಿ ಕೇಂದ್ರ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಣ ಜಮಾ ಮಾಡುತ್ತದೆ. ಆದರೆ, ಕೋಟೆನಾಡಿನಲ್ಲಿ ಈ ಕಿಸಾನ್ ಸಮ್ಮಾನ್ ಯೋಜನೆಗೆ ಅಂತರ ರಾಜ್ಯದ ಖದೀಮರ ಕಣ್ಣು ಬಿದ್ದು, ಕೋಟಿ ಕೋಟಿ ಹಣ ಲಪಟಾಯಿದ್ದಾರೆ.
ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ ಗಗನ ಕುಸುಮವಾಗಿದೆ. ಕೇಂದ್ರ ಸರ್ಕಾರ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿ ಅನ್ನದಾತನ ಕೈ ಹಿಡಿಯುವ ಕೆಲಸ ಮಾಡಿದೆ. ಇತ್ತ ಹಣಕ್ಕೆ ಅಂತರ್ ರಾಜ್ಯದ ಖದೀಮರು ನಕಲಿ ಅರ್ಜಿಗಳಿಂದ ಕೃಷಿ ಇಲಾಖೆಯನ್ನೇ ಯಾಮಾರಿಸಿ ಲಕ್ಷ ಲಕ್ಷ ಹಣ ಲಪಟಾಯಿಸಿದ್ದಾರಂತೆ. ಹೀಗಾಗಿ, ಯೋಜನೆ ಫಲಾನುಭವಿಗೆ ತಲುಪಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಏನಿದು ಘಟನೆ : ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯ ರೈತರ ಖಾತೆಗಳಿಗೆ ಜಮೆಯಾಗಬೇಕಿದ್ದ ಹಣ ಸದ್ಯ ಖದೀಮರ ಕೈ ಸೇರಿದೆ. ಅಂತರ್ ರಾಜ್ಯದ ಖದೀಮರು ರೈತರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ತುಂಬಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಸೇರಬೇಕಾದ ಹಣ ಖದೀಮರ ಪಾಲಾಗಿದೆ ಎನ್ನಲಾಗುತ್ತಿದೆ.
ಇನ್ನು, ಫಲಾನುಭವಿಗಳು ಹಣ ಜಮಾ ಆಗಿರುವ ಬಗ್ಗೆ ತಮ್ಮ ಬ್ಯಾಂಕ್ ಖಾತೆಗಳನ್ನ ಪರಿಶೀಲನೆ ಮಾಡಿದ್ರೆ, ಕೇಂದ್ರ ಸರ್ಕಾರದ ಈ ಹಣ ಬಂದಿಲ್ಲ. ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಬಳಿಕವಷ್ಟೇ ವಂಚನೆ ಆಗಿರುವುದು ಬೆಳಕಿಗೆ ಬಂದಿದ್ದು, ರಾಜ್ಯ ಕೃಷಿ ಇಲಾಖೆ ಅಧಿಕಾರಿಗಳು ಮೋಸದ ಕುರಿತು ದೂರು ದಾಖಲಿಸಿದ್ದಾರೆ ಎನ್ನಾಲಾಗುತ್ತಿದೆ.
ವಂಚನೆ ಕುರಿತು ರೈತ ಮುಖಂಡರ ಮಾತೇನು? : ತಂತ್ರಜ್ಞಾನದ ಯುಗದಲ್ಲಿ ಜಿಲ್ಲೆಯ ರೈತರಿಗೆ ಮೋಸ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಯೋಜನೆಗೆ ರೈತರು ನೋಂದಣಿಯಾಗುವ ಸಮಯದಲ್ಲಿ ಕೃಷಿಕರಿಂದ ಸೂಕ್ತ ದಾಖಲೆಗಳ ಮೂಲಕ ಆನ್‌ಲೈನ್ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಆದರೆ, ಈಗ ಅಧಿಕಾರಿಗಳು ವಂಚನೆಯಾಗಿದೆ ಎಂದು ಹೇಳುತ್ತಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆಗುವಂತಾಗಿದೆ.
ವಂಚನೆ ಕುರಿತು ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೇಳೋದೇನು?: ಪ್ರಧಾನ ಮಂತ್ರಿ ಸನ್ಮಾನ್ ಯೋಜನೆಗೆ ಆಗಿರುವ ದೋಖಾ ಕುರಿತು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರನ್ನ ಕೇಳಿದ್ರೆ, ಯೋಜನೆ ಹಣ ವಂಚನೆಯಾಗಿರುವುದು ನಿಜ.
ಪ್ರಕರಣದಲ್ಲಿ ರಾಜ್ಯದ ಮಟ್ಟದಲ್ಲಿ ತನಿಖೆಯಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲೆಯ ಕೃಷಿ ಇಲಾಖೆ ಜೆಡಿ ವಂಚನೆ ಕುರಿತು ದೂರು ನೀಡಿದ್ದಾರೆ. ಯಾರೇ ಪ್ರಕರಣದಲ್ಲಿ ಶಾಮಿಲಾಗಿದ್ದರು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ.