ಚಿತ್ರದುರ್ಗ : ಜಿಲ್ಲೆಗೆ ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜನ್ನು ಸರ್ಕಾರ ಹಿಂಪಡೆದು ಬಳಿಕ ಕನಕಪುರಕ್ಕೆ ಮಂಜೂರು ಮಾಡಿದೆ. ಕಾಲೇಜನ್ನು ಮರಳಿ ಚಿತ್ರದುರ್ಗಕ್ಕೆ ನೀಡುವಂತೆ ನವ ನಿರ್ಮಾಣ ವೇದಿಕೆ ಜಿಲ್ಲಾದ್ಯಕ್ಷ ಕೆ ಟಿ ಶಿವಕುಮಾರ್ ಆಗ್ರಹಿಸಿದ್ದಾರೆ.
ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಂದು ಸರ್ಕಾರಿ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿತ್ತು. ಕೆಲ ಜನಪ್ರತಿನಿಧಿಗಳ ಲಾಬಿಯಿಂದ ಕೈತಪ್ಪಿದ್ದ ಕಾಲೇಜನ್ನು ಮರಳಿ ನೀಡುವಂತೆ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶಿವಕುಮಾರ್ ಸುದ್ದಿಗೋಷ್ಠಿ ನಡೆಸುವ ಮೂಲಕ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.
ಅಧಿವೇಶನದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಈ ವಿಚಾರದ ಬಗ್ಗೆ ಪ್ರಸ್ತಾಪಿಸಬೇಕು. ಇಲ್ಲವಾದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಶಾಸಕರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನನಗೆ ಗುಂಡಿಟ್ಟರೂ ಸರಿ, ಬಂಧಿಸಿದರೂ ಸರಿ ಮೆಡಿಕಲ್ ಕಾಲೇಜು ಹೋರಾಟ ಬಿಡಲ್ಲ. ಅವರಿಂದ ಆಗಲಿಲ್ಲ ಎಂದರೆ ಶಾಸಕರಿಗೆ ನೇರವಾಗಿ ಸೀರೆ, ಬಳೆ ನೀಡುತ್ತೇನೆಂದು ವಿವಾದಾತ್ಮಕ ಹೇಳಿಕೆ ನೀಡಿದರು.