ETV Bharat / state

​​​​​​​ಕೇಂದ್ರದಿಂದ ನೆರೆ ಪರಿಹಾರ ವಿಳಂಬವಾಗಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ ಎಂದ ರಾಮುಲು - ಆರೋಗ್ಯ ಸಚಿವ ಬಿ.ಶ್ರೀರಾಮುಲು

ಚಿತ್ರದುರ್ಗ ಜಿಲ್ಲೆ ಹಿರುಯೂರಲ್ಲಿ ಇಂದಿರಾ ಕ್ಯಾಂಟಿನ್​ ಉದ್ಘಾಟಿಸಿ, ಕೇಂದ್ರದಿಂದ ನೆರೆ ಪರಿಹಾರ ವಿಳಂಬವಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು
author img

By

Published : Oct 4, 2019, 6:08 PM IST

ಚಿತ್ರದುರ್ಗ: ಕೇಂದ್ರದಿಂದ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಕ್ಕಾಗಿ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು

ಜಿಲ್ಲೆಯ ಹಿರಿಯೂರಿನಲ್ಲಿ ಇಂದಿರಾ ಕ್ಯಾಂಟಿನ್ ಉದ್ಧಾಟಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಅಥವಾ ಮೂರು ದಿನಗಳಲ್ಲಿ ಕೇಂದ್ರದಿಂದ ನೆರೆ ಪರಿಹಾದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ. ಪ್ರಧಾನಿ ಅವರು ವಿದೇಶಿ ಪ್ರವಾಸದಲ್ಲಿ ಇದ್ದರು. ಹೀಗಾಗಿ ವಿಳಂಬವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ 3500 ಕೋಟಿ ಪರಿಹಾರ ಧನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಎಸ್​ಡಿಆರ್​ಎಫ್ ಮತ್ತು ಎನ್​ಡಿಆರ್​ಎಫ್ ನಿಯಮಾನುಸಾರವಾಗಿ ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು.

ನೆರೆ ಪರಿಹಾರದಲ್ಲಿ ಯಾರು ರಾಜಕೀಯ ಮಾಡಬಾರದು. ಪಕ್ಷಾತೀತವಾಗಿ ಎಲ್ಲರು ಸೇರಿ ಕೇಂದ್ರಕ್ಕೆ ನಿಯೋಗ ಹೋಗೋಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಈಚೆಗೆ ಕೇಂದ್ರ ಸರ್ಕಾರ ಇದ್ದೂ ಸತ್ತಂತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

Intro:ಕೇಂದ್ರದಿಂದ ಬರ ಪರಿಹಾರ ವಿಳಂಬ ಬಹಿರಂಗ ಕ್ಷಮೆ ಯಾಚಿಸಿದ ಸಚಿವ ಶ್ರೀರಾಮುಲು

ಆ್ಯಂಕರ್:- ಕೇಂದ್ರದಿಂದ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಕ್ಕಾಗಿ ಆರೋಗ್ಯ ಸಚಿವ ಶ್ರೀ ರಾಮುಲು ಬಹಿರಂಗ ಕ್ಷಮೆ ಯಾಚಿಸಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಇಂದಿರಾ ಕ್ಯಾಂಟಿನ್ ಉದ್ಧಾಟಿಸಿ ಬಳಿಕ ಪ್ರತಿಕ್ರಿಯಿಸಿದ ಅವರು
ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ 3500 ಕೋಟಿ  ರೂಪಾಯಿ ಪ್ರಸ್ತಾವನೆ ಕಳುಹಿಸಿದ್ದೇವೆ, ಪರಿಹಾರ ಹಣ ಇಷ್ಟೊತ್ತಿಗೆ ಬರಬೇಕಿತ್ತು, ತಡವಾಗಿರೋದಕ್ಕೆ ಬಹಿರಂಗ ಕ್ಷಮೆ ಯಾಚಿಸುತ್ತೇನೆ ಎಂದು ಕ್ಷಮೆ ಯಾಚಿಸಿದರು. ಇನ್ನೂ ಎರಡು-ಮೂರು ದಿನದ ಒಳಗೆ ಕೇಂದ್ರದ ಪರಿಹಾರ ಬರುತ್ತೆ ಎಂಬ ಮಾಹಿತಿ ಇದೆ. ಎಸ್.ಡಿ.ಆರ್.ಎಫ್ ಮತ್ತು ಎನ್ ಡಿ‌.ಆರ್.ಎಫ್ ನಿಯಮಾನುಸಾರವಾಗಿ ನಾವು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು. ಇನ್ನೂ ಕೇಂದ್ರ ಸರ್ಕಾರ ಇದ್ದೂ ಸತ್ತಂತೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬರ ಪರಿಹಾರ ಕಾರ್ಯದಲ್ಲಿ ಯಾರೂ ರಾಜಕಾರಣ ಮಾಡಬಾರದು, ಪಕ್ಷಾತೀತವಾಗಿ ಎಲ್ಲರೂ ಸೇರಿ ಕೇಂದ್ರಕ್ಕೆ ನಿಯೋಗ ಹೋಗೋಣ, ನೆರೆ ಪರಿಹಾರದಲ್ಲಿ ರಾಜಕೀಯ ಮಾಡೋದನ್ನು ಸಿದ್ದರಾಮಯ್ಯ ನಿಲ್ಲಿಸಲಿ ಎಂದು ಆಕ್ರೋಶವ್ಯಕ್ತ ಪಡಿಸಿದರು. ಸರ್ಕಾರದ ಖಜಾನೆ ಖಾಲಿ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ರಾಮುಲು ಸಿಎಂ ಯಡಿಯೂರಪ್ಪ ಖಜಾನೆ ಖಾಲಿ ಅಂತ ಹೇಳಿರೋದು ಬೇರೆ ಉದ್ದೇಶದಿಂದ ಅಲ್ಲ, ಸಿಎಂ ಹೇಳಿಕೆಯನ್ನ ಮಾಧ್ಯಮಗಳಲ್ಲಿ ತಿರುಚಲಾಗಿದೆ.
ಬೆಳಗಾವಿಯಲ್ಲಿ ಸಂತ್ರಸ್ತರು ಸಿಎಂ ಗೆ ಮುತ್ತಿಗೆ ಹಾಕಿದ್ದು, ನಾವು
ರೈತರ, ಸಂತ್ರಸ್ತರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಫ್ಲೋ....

ಬೈಟ್01 & 02:- ಶ್ರೀ ರಾಮುಲು, ಆರೋಗ್ಯ ಸಚಿವ...Body:RamluConclusion:Avb
ETV Bharat Logo

Copyright © 2025 Ushodaya Enterprises Pvt. Ltd., All Rights Reserved.