ಚಿತ್ರದುರ್ಗ: ಕುರಿಗಳಿಗೆ ವಿಚಿತ್ರ ರೋಗ ತಗುಲಿದ್ದು ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಮೃತ ಕುರಿಗಳನ್ನು ಡಿಸಿ ಕಚೇರಿ ಮುಂಭಾಗ ಇಟ್ಟು ರೈತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.
ತಾಲೂಕಿನ ಹುಣಸೆಕಟ್ಟೆ, ಕೂನಬೇವು ಗ್ರಾಮಗಳಲ್ಲಿ ವಿಚಿತ್ರ ರೋಗಕ್ಕೆ ನೂರಾರು ಕುರಿ ಬಲಿಯಾದ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರಿಗೆ ರೈತ ಸಂಘ ಹಾಗೂ ಹಸಿರು ಸೇನೆ ಸಾಥ್ ನೀಡಿದೆ. ಕಳೆದ 1 ತಿಂಗಳಲ್ಲಿ 500 ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ ಎಂಬುದು ರೈತರ ಅಳಲು ತೋಡಿಕೊಂಡಿದ್ದಾರೆ.
ಮೃತ ಕುರಿಗಳಿಗೆ ಸೂಕ್ತ ವಿಮೆ, ಪರಿಹಾರ ನೀಡಲು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರಿಗೆ ಒತ್ತಾಯಿಸಿದ್ದು, ಕೂನಬೇವು ಗ್ರಾಮದ ಪಶು ವೈದ್ಯಕೀಯ ಕೇಂದ್ರಕ್ಕೆ ವೈದ್ಯರ ನೇಮಿಸಲು ರೈತರು ಮನವಿ ಮಾಡಿದ್ದಾರೆ.