ETV Bharat / state

ಫ್ಯಾಟ್ ಕಡಿಮೆ ಎಂದು ಹಾಲು ವಾಪಸ್; ಚರಂಡಿಗೆ ಹಾಲು ಚೆಲ್ಲಿ ರೈತರ ಆಕ್ರೋಶ - farmers dump milk on ground

3.5 ಡಿಗ್ರಿ ಫ್ಯಾಟ್ ಬರಲಿಲ್ಲ ಎಂದು ಹಾಲನ್ನು ವಾಪಸ್​​ ಕಳುಹಿಸಿದ್ದಾರೆ. ರಾತ್ರಿ ವೇಳೆ ಏನು ಮಾಡುವುದು ಎಂದು ತಿಳಿಯದೆ ರೈತರು ಹಾಲನ್ನು ಚರಂಡಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chitradurga
ಹಾಲು ಚೆಲ್ಲಿ ರೈತರ ಆಕ್ರೋಶ
author img

By

Published : Jun 7, 2021, 1:10 PM IST

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕು ಲಕ್ಕವ್ವನಹಳ್ಳಿ ಬಿಎಂಸಿ ಹಾಲು ಸಂಗ್ರಹಣ ಕೇಂದ್ರದಲ್ಲಿ ಸುಮಾರು 250 ಲೀಟರ್​​ನಷ್ಟು ಹಾಲನ್ನು 3.5 ಡಿಗ್ರಿ ಫ್ಯಾಟ್ ಬರಲಿಲ್ಲ ಎಂದು ವಾಪಸ್​​ ಕಳುಹಿಸಿದ್ದರು. ರಾತ್ರಿ ವೇಳೆ ಏನು ಮಾಡುವುದು ಎಂದು ತಿಳಿಯದೆ ರೈತರು ಹಾಲನ್ನು ಚರಂಡಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲು ಚೆಲ್ಲಿ ರೈತರ ಆಕ್ರೋಶ

ಲಾಕ್​​ಡೌನ್ ಇರುವುದರಿಂದ ಹಾಲು ಮಾರಾಟವಾಗದೆ ಉಳಿದಿರುವುದರಿಂದ ಕೆಎಂಎಫ್ ನವರು ರೈತರಿಂದ ಖರೀದಿಸುವ ಹಾಲಿನ ಡಿಗ್ರಿ 3.5 ಗಿಂತ ಕಡಿಮೆ ಇದೆ ಎಂದು ವಾಪಸ್ ಕಳಿಸುತ್ತಿದ್ದಾರೆ. ಅತಿಯಾದ ಬಿಸಿಲಿನಿಂದ ಹಸುಗಳ ದೇಹದಲ್ಲಿ ಫ್ಯಾಟ್ ಅಂಶ ಕಡಿಮೆಯಾಗುತ್ತದೆ. ಇದೇ ಒಂದು ಕಾರಣ ಮುಂದಿಟ್ಟುಕೊಂಡು ಕೆಎಂಎಫ್ ನವರು ಈಗಾಗಲೇ ಸಂಕಷ್ಟದಲ್ಲಿ ಇರುವ ರೈತರ ಗಾಯದ ಮೇಲೆ ಬರೆ ಹಾಕುತ್ತಿದ್ದಾರೆ.

ವರ್ಷ ಪೂರ್ತಿ ಉತ್ತಮವಾದ 4.1 ಕ್ಕಿಂತ ಹೆಚ್ಚಿರುವ ಹಾಲನ್ನು ಸರಬರಾಜು ಮಾಡುತ್ತಾರೆ. ಬೇಸಿಗೆಯಲ್ಲಿ ಒಂದರಿಂದ ಒಂದೂವರೆ ತಿಂಗಳು ಈ ರೀತಿಯಾಗುತ್ತದೆ. ಇದನ್ನು ಸರಿದೂಗಿಸಿಕೊಳ್ಳಬೇಕಾದ ಜವಾಬ್ದಾರಿ ಕೆಎಂಎಫ್ ಸಂಸ್ಥೆಗೆ ಸೇರಿದ್ದು. ವರ್ಷಪೂರ್ತಿ ಲಾಭಗಳಿಸಿ ಒಂದೂವರೆ ತಿಂಗಳಲ್ಲಿ ಆಗುವ ವಾತಾವರಣದ ತೊಂದರೆಗೆ ರೈತರನ್ನು ಬಲಿಪಶು ಮಾಡುವುದು ಎಷ್ಟು ಸರಿ. ಇದೇ ರೀತಿ ಮುಂದುವರೆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಹಿಂದೆ ಖರೀದಿ ಮಾಡಿದಂತೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಈ ರೀತಿ ಘಟನೆಗಳು ಪುನರಾವರ್ತನೆಯಾದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಹೋರಾಟಗಾರ ಕಸವನಹಳ್ಳಿ ರಮೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.