ಚಿತ್ರದುರ್ಗ: ಕಾಮಗಾರಿ ಹಂತದಲ್ಲಿರುವ ಸಿಸಿ ರಸ್ತೆಗಳು ಜನರಿಗೆ ಪ್ರಾಣಾಪಾಯ ತಂದೊಡ್ಡುತ್ತಿವೆ ಎಂದು ಈಟಿವಿ ಭಾರತ ವರದಿ ಬಿತ್ತರಿಸುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಸ್ಥಳದಲ್ಲಿ ಬ್ಯಾರಿಕೇಡ್ ಹಾಗೂ ರಿಬ್ಬನ್ ಅಳವಡಿಕೆ ಮಾಡಿ ರಸ್ತೆ ಸುರಕ್ಷತಾ ಕ್ರಮಕ್ಕೆ ಮುಂದಾಗಿದ್ದಾರೆ.
ಕಾಮಗಾರಿ ಸ್ಥಳದಲ್ಲಿ ರಸ್ತೆ ಸುರಕ್ಷತಾ ಕ್ರಮ ಕೊರತೆ ಎಂಬ ಶೀರ್ಷಿಕೆ ಅಡಿ 'ಈಟಿವಿ ಭಾರತ' ವರದಿ ಬಿತ್ತರವಾಗುತ್ತಿದಂತೆ, ನಗರಸಭೆ ಅಧಿಕಾರಿಗಳು ಇಂದು ಚಿತ್ರದುರ್ಗ ನಗರದ, ಚಳ್ಳಕೆರೆ ಗೇಟ್ ಮಾರ್ಗವಾಗಿ ಮದಕರಿ ಸರ್ಕಲ್ ಹಾಗೂ ಪ್ರವಾಸಿ ಮಂದಿರ ಮುಂಭಾಗ ಸೇರಿದಂತೆ ಹಲವು ಭಾಗಗಳಲ್ಲಿ ಸುರಕ್ಷತಾ ಕ್ರಮ ಮಾಡಿದ್ದಾರೆ. ವಾಹನ ಸವಾರರಿಗೆ ಎಚ್ಚರಿಕೆ ಸಂದೇಶ ರವಾನಿಸುವ ಬ್ಯಾರಿಕೇಡ್, ರಿಬ್ಬನ್‌ಗಳನ್ನು ಅಳವಡಿಕೆ ಮಾಡಿದ್ದಾರೆ.
ಇದನ್ನೂ ಓದಿ: ಕಾಮಗಾರಿ ಸ್ಥಳದಲ್ಲಿ ರಸ್ತೆ ಸುರಕ್ಷತಾ ಕ್ರಮದ ಕೊರತೆ, ಸಾರ್ವಜನಿಕರ ಆಕ್ರೋಶ
ಮೊನ್ನೆ ರಾತ್ರಿ ಕೆಂಚಪ್ಪ ಎಂಬುವರು ಕಾಮಗಾರಿ ಸ್ಥಳದಲ್ಲಿದ್ದ ಜೆಸಿಬಿ ವಾಹನ ಗುದ್ದಿಸಿ ಪ್ರಾಣ ಕಳೆದುಕೊಂಡಿದ್ದರು. ಜೊತೆಗಿದ್ದ ಮೂವರು ಗಾಯಗೊಂಡಿದ್ದರು. ಇವೆಲ್ಲವುಗಳ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ಬಿತ್ತರವಾಗುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಇಂದು ಸಿಸಿ ರಸ್ತೆ ಕಾಮಗಾರಿ ಹಂತದಲ್ಲಿರುವ ರಸ್ತೆಗಳಿಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಮೂಲಕ ವಾಹನ ಸವಾರರಿಗೆ ಹಾಗೂ ನಗರವಾಸಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಇನ್ನು ಈಟಿವಿ ಭಾರತ ವರದಿಗೆ ಎಚ್ಚೆತ್ತ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರುವುದು, ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಮಂದಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಈಟಿವಿ ಭಾರತದ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.