ಚಿತ್ರದುರ್ಗ: ಕೋಟೆನಾಡಿನ ವನ್ಯಜೀವಿಗಳ ರಕ್ಷಣೆ ಮುಂದಾಗಬೇಕಿದ್ದ ಅರಣ್ಯ ಇಲಾಖೆ, ಗಣಿ ಮಾಲೀಕರ ಪರವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಹೌದು, ಜಿಲ್ಲೆಯ ಏಕೈಕ ವನ್ಯಜೀವಿ ಧಾಮ ಜೋಗಿಮಟ್ಟಿ ಗ್ರಾಮದ ಬಳಿಯಿದೆ. ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಜೋಗಿಮಟ್ಟಿಯ ಸುತ್ತಲು ಇರುವ ಬೆಟ್ಟ-ಗುಡ್ಡಗಳು ಹಚ್ಚಹಸಿರಿನಿಂದ ಕೂಡಿವೆ. ಮಧ್ಯ ಕರ್ನಾಟಕದ ಏಕೈಕ ಅತ್ಯಂತ ಸೂಕ್ಷ್ಮ ವನ್ಯಜೀವಿಧಾಮ ಜೋಗಿಮಟ್ಟಿ ಅರಣ್ಯ ಪ್ರದೇಶದ ವನ್ಯಜೀವಿಧಾಮದ ಮೇಲೆ ಕಾಡುಗಳ್ಳರ ಕಣ್ಣು ಬಿದ್ದಿಲ್ಲ.
ಆದರೆ, ಜೋಗಿಮಟ್ಟಿ ಅರಣ್ಯ ವ್ಯಾಪ್ತಿಯ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳೇ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ವನ್ಯ ಜೀವಿಗಳು ವಾಸವಿರುವ 10 ಕಿ.ಮೀ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ನಡೆಸಬಾರದು ಎಂದು ಸರ್ಕಾರ ಆದೇಶವಿದೆ. ಆದರೆ, ಜಿಲ್ಲಾಡಳಿತ ಸರ್ಕಾರದ ನಿಮಯ ಗೊತ್ತಿಲ್ಲದಂತೆ ವರ್ತಿಸುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪ ಮಾಡುತ್ತಿದ್ದಾರೆ.
ಓದಿ: ನಾವು ಕರ್ನಾಟಕದಲ್ಲಿರುವುದು ದೇವರ ದಯೆ.. ಮಹಾ ಸಿಎಂಗೆ ಮರಾಠಿ ಭಾಷಿಕರಿಂದಲೇ ಪ್ರತ್ಯುತ್ತರ
ಏನಿದು ಆರೋಪ:
ಜೋಗಿಮಟ್ಟಿ ರಾಷ್ಟ್ರೀಯ ವನ್ಯಧಾಮದ 10 ಕಿಲೋಮೀಟರ್ ವ್ಯಾಪ್ತಿಯ 1,214 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಗಣಿ ಮಾಲೀಕ ಚಿನ್ನಸ್ವಾಮಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಗಣಿಗಾರಿಕೆಯಿಂದಾಗುವ ಸಮಸ್ಯೆಗಳ ಬಗ್ಗೆ ಪರಿಶೀಲಿಸದೇ, ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಗಣಿಗಾರಿಕೆ ನಡೆಸಲು ಶಿಫಾರಸು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅರಣ್ಯ ಇಲಾಖೆ ಪರಿಶೀಲನೆ ನಡೆಸಿದ ಸ್ಥಳದಲ್ಲಿ ಅಳಿವಿನ ಅಂಚಿನಲ್ಲಿರುವ ಯಾವುದೇ ವನ್ಯಜೀವಿ ವಾಸಿಸುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿರುವುದು ಒಂದೆಡೆಯಾದ್ರೆ, ಇತ್ತ ಗಣಿಗಾರಿಕೆ ನಡೆಸಲು ಯಾವುದೇ ಅಡೆತಡೆ ಇಲ್ಲ ಎಂಬ ಶಿಫಾರಸು ಕೋಟೆನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.