ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ಕುಡಿದ ನಶೆಯಲ್ಲಿ ಯುವಕನೊಬ್ಬ ಗೂಳಿ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದು, ಮೂಕ ಪ್ರಾಣಿ ನರಕಯಾತನೆ ಅನುಭವಿಸುತ್ತಿದೆ.
ಭರಮಸಾಗರ ಗ್ರಾಮದ ದುರ್ಗಾಂಬಿಕಾ ದೇವಿಯ ಗೂಳಿ ಮೇಲೆ ಆ್ಯಸಿಡ್ ದಾಳಿಗೆ ತುತ್ತಾಗಿದ್ದು, ಗೂಳಿಯ ಚರ್ಮ ಪೂರ್ತಿ ಸುಟ್ಟು ಹೋಗಿದೆ. ಗಾಯದ ನೋವಿನಿಂದ ಮೂಕ ಪ್ರಾಣಿ ನರಕಯಾತನೆ ಅನುಭವಿಸುತ್ತಿದೆ. ಇದರ ನೋವು ನೋಡಲಾರದೆ ಸಾರ್ವಜನಿಕರು ಗಾಯಕ್ಕೆ ಅರಿಶಿಣ ಹಚ್ಚಿ ರಕ್ಷಣೆ ಮಾಡಿದ್ದಾರೆ. ಈ ರೀತಿ ವಿಕೃತ ಮೆರೆದಿರುವರ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.