ಚಿತ್ರದುರ್ಗ: ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಅದನ್ನು ಪೋಸ್ಟ್ ಮಾರ್ಟಂ ಮಾಡಲು ವೈದ್ಯರು ನಿರಾಕರಿಸಿರುವ ಘಟನೆ ಜಿಲ್ಲೆಯ ಚಳ್ಳಕೆರೆಯ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಚಳ್ಳಕೆರೆಯ ಹೊರವಲಯದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಪೋಸ್ಟ್ ಮಾರ್ಟಂ ಮಾಡಲು ತಾಲೂಕು ಆಸ್ಪತ್ರೆ ವೈದ್ಯರು ನಿರಾಕರಿಸಿರುವುದು ಪೊಲೀಸರಿಗೇ ತಲೆನೋವಾಗಿ ಪರಿಣಮಿಸಿದೆ.
ಮೃತದೇಹವನ್ನು ಶವಾಗಾರದ ಒಳಗೂ ಬಿಡದೆ ಆಸ್ಪತ್ರೆ ಹೊರಗೇ ಶವವನ್ನು ಇಡಲಾಗಿದೆ.