ETV Bharat / state

ಚಿತ್ರದುರ್ಗ: ಎಸಿಬಿ ಬಲೆಗೆ ಬಿದ್ದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ - ಈಟಿವಿ ಭಾರತ ಕನ್ನಡ

ಯೋಜನೆಯ ಫಲಾನುಭವಿಗಳಿಂದ ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿದ್ದು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ತೋಟಯ್ಯ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

director-of-horticulture-department-arrested-by-acb-police
ಚಿತ್ರದುರ್ಗ : ಎಸಿಬಿ ಬಲೆಗೆ ಬಿದ್ದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ
author img

By

Published : Aug 6, 2022, 12:45 PM IST

ಚಿತ್ರದುರ್ಗ: ಕೃಷಿ ಹೊಂಡ ನಿರ್ಮಾಣಕ್ಕೆ ಯೋಜನೆಯ ಫಲಾನುಭವಿಗೆ ಚೆಕ್‌ ವಿತರಿಸಲು ಲಂಚಕ್ಕೆ ಬೇಡಿಕೆಗೆ ಇಟ್ಟಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟಯ್ಯ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಅರಬಗಟ್ಟ ಗ್ರಾಮದ ರೈತ ಕೃಷ್ಣನಾಯ್ಕ್‌ ಎಂಬುವರು ಕೃಷಿ ಹೊಂಡ ನಿರ್ಮಿಸಿದ್ದರು. ಈ ಯೋಜನೆಯ 2.8 ಲಕ್ಷ ರೂ. ಚೆಕ್‌ ವಿತರಣೆಗೆ, ತೋಟಯ್ಯ ಅವರು ರೂ. 1.4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಈ ಕುರಿತು ಕೃಷ್ಣನಾಯ್ಕ್‌ ಎಂಬವರು ಎಸಿಬಿಗೆ ದೂರು ನೀಡಿದ್ದು, ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಬಿ ಡಿವೈಎಸ್‌ಪಿ ಉಮೇಶ್‌ ನೇತೃತ್ವದ ತಂಡ ಕಚೇರಿಯ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಓದಿ : ಅನೈತಿಕ ಸಂಬಂಧಕ್ಕೆ ಅಡ್ಡಿ: ಮಗನನ್ನೇ ಕೊಲೆ ಮಾಡಿಸಿದ ತಾಯಿ, ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.