ETV Bharat / state

ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದ ಡಿ.ಸಿ ಕವಿತಾ ಎಸ್ ಮನ್ನಿಕೇರಿ

ಕೊರೊನಾ ಕ್ರಿಟಿಕಲ್ ಪ್ರಕರಣಗಳಿಗಾಗಿ ಜಿಲ್ಲಾಸ್ಪತ್ರೆಯಲ್ಲಿ 175 ಆಕ್ಸಿಜನ್ ಬೆಡ್​ಗಳಿದ್ದು, ಅದರಲ್ಲಿ 50 ಬೆಡ್​ಗಳನ್ನು ಮಕ್ಕಳು ಹಾಗು ತಾಯಂದಿರಿಗೆ ಮೀಸಲಿಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 1,255 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 800 ಜನ ಸೋಂಕಿತರು ಹೋಂ ಐಸ್ಯೂಲೆಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮಾಹಿತಿ ನೀಡಿದರು.

Health about Corona rising
ಡಿ.ಸಿ ಕವಿತಾ ಎಸ್ ಮನ್ನಿಕೇರಿ
author img

By

Published : Sep 15, 2020, 12:08 AM IST

ಚಿತ್ರದುರ್ಗ: ಕಳೆದ ಎರಡು ತಿಂಗಳಿನಿಂದ ಕೊರೊನಾ ತಡೆಗೆ ಜಿಲ್ಲಾಡಳಿತ ಏನೆಲ್ಲ ಸಿದ್ಧತೆ ಮಾಡಿಕೊಂಡಿತ್ತು ಹಾಗೂ ಪ್ರಸ್ತುತ ಯಾವೆಲ್ಲ ಕ್ರಮಗಳನ್ನು ಅನುಸರಿಸುತ್ತಿದೆ ಎಂಬುದರ ಕುರಿತು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 1,140 ಆಕ್ಸಿಜನ್ ಬೆಡ್​ಗಳಿದ್ದು, ಅವುಗಳನ್ನು 20 ಕೋವಿಡ್ ಕೇರ್ ಸೆಂಟರ್ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಳಕೆ‌ ಮಾಡಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ 50 ಆಕ್ಸಿಜನ್ ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಹಾಗೂ ಬೆಡ್​ಗಳ ಕೊರತೆ ಎದುರಾಗುತ್ತಿತ್ತು. ಅದನ್ನು ನೀಗಿಸಲು ಸೋಂಕಿತರಿಗೆ ವಿವಿಧ ಕೋವಿಡ್ ಕೇರ್ ಸೆಂಟರ್​ಗಳಲ್ಲೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿ ಚಿಕಿತ್ಸೆ ಪಡೆಯತಕ್ಕದ್ದು ಎಂದು ಜನರಲ್ಲಿ ಮನವಿ ಮಾಡಿದರು.

ಆರೋಗ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದ ಡಿ.ಸಿ ಕವಿತಾ ಎಸ್ ಮನ್ನಿಕೇರಿ

ಕೊರೊನಾ ಕ್ರಿಟಿಕಲ್ ಪ್ರಕರಣಗಳಿಗಾಗಿ ಜಿಲ್ಲಾಸ್ಪತ್ರೆಯಲ್ಲಿ 175 ಆಕ್ಸಿಜನ್ ಬೆಡ್​ಗಳಿದ್ದು, ಅದರಲ್ಲಿ 50 ಬೆಡ್​ಗಳನ್ನು ಮಕ್ಕಳು ಹಾಗು ತಾಯಂದಿರಿಗೆ ಮೀಸಲಿಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 1,255 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 800 ಜನ ಸೋಂಕಿತರು ಹೋಂ ಐಸ್ಯೂಲೆಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಪಾಸಿಟಿವ್ ರೇಟ್ ಶೇ 9.70 ಇದ್ದು, ಡೇತ್ ರೇಟ್ ಶೇ 0.65 ಇದೆ. ಡಿಸ್ಚಾರ್ಜ್​​​ ರೇಟ್ ಶೇ 17.66 ಇದೆ ಎಂದರು. ಇಲ್ಲಿಯ ತನಕ ಒಟ್ಟು 51,708 ಜನರಿಗೆ ಕೊರೊನಾ ಟೆಸ್ಟ್‌ ಮಾಡಲಾಗಿದ್ದು, ಜಿಲ್ಲೆಯಲ್ಲಿ 450 ಸ್ಟಾಫ್ ನರ್ಸ್, 184 ವೈದ್ಯರಿದ್ದು, 80 ಲ್ಯಾಬ್ ಟೆಕ್ನಿಷಿಯನ್, 600 ಗ್ರೂಪ್‌ಡಿ ನೌಕರರು, 110 ಫಾರ್ಮಾ ಸಿಸ್ಟರ್ಸ್, ಆ್ಯಂಬುಲೆನ್ಸ್ 34 ಇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.