ಚಿತ್ರದುರ್ಗ: ಲಾಕ್ಡೌನ್ ಆದೇಶ ಉಲ್ಲಂಘಿಸಿ ಜನರು ಬೀದಿಗಿಳಿಯುತ್ತಿದ್ದಾರೆ. ಹೀಗಾಗಿ ಚಿತ್ರದುರ್ಗದ ಪೋಲಿಸರು ಕೊರೊನಾ ಆಕೃತಿ ಬಿಡಿಸಿ ಜಾಗೃತಿ ಅಭಿಯಾನ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಸಂಜೀವಿನಿ ಗ್ರೂಪ್ ವತಿಯಿಂದ ಬೃಹದಾಕಾರದ ಕೊರೊನಾ ಆಕೃತಿ ಬಿಡಿಸಿ ಜಾಗೃತಿ ಅಭಿಯಾನಕ್ಕೆ ಡಿಸಿ ವಿನೋತ್ ಪ್ರಿಯಾ, ಎಸ್ಪಿ ಜಿ.ರಾಧಿಕಾ ಚಾಲನೆ ನೀಡಿದರು. ಮನೆಯಲ್ಲಿ ಇದ್ದರೆ ಆಯಸ್ಸು, ಹೊರಗೆ ಬಂದರೆ ವೈರಸ್ಸು ಎಂಬ ಬರಹವನ್ನ ರಸ್ತೆಯಲ್ಲಿ ಚಿತ್ರಿಸುವ ಮೂಲಕ ಮನೆಯಲ್ಲಿಯೇ ಇರಿ. ಹೊರಗಡೆ ಬರಬೇಡಿ ಎಂದು ಜನರಿಗೆ ಮನವಿ ಮಾಡಿದ್ರು.
ಬೈಕ್ನಲ್ಲಿ ಬಂದವರಿಗೆ ಕೊರೊನಾ ವೈರಸ್ ಅಟ್ಯಾಕ್ ಆಗುವ ಬಗ್ಗೆ ಪೊಲೀಸರು ಅಣಕು ಪ್ರದರ್ಶನ ಮಾಡಿದ್ರು. ಬೃಹತ್ ಆಕಾರದ ಕೊರೊನಾ ವೈರಸ್ ಆಕೃತಿ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.