ETV Bharat / state

ಚಿತ್ರದುರ್ಗದಲ್ಲಿ ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆ: ದಾರಿ ಉದ್ದಕ್ಕೂ ಜನಸಾಗರ

ಚಿತ್ರದುರ್ಗದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ನಡೆಯುತ್ತಿದೆ.

congress-leader-rahul-gandhis-bharat-jodo-yatra-in-chitradurga
ಚಿತ್ರದುರ್ಗದಲ್ಲಿ ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆ: ದಾರಿಯುದ್ದಕ್ಕೂ ಜನಸಾಗರ
author img

By

Published : Oct 13, 2022, 9:55 PM IST

Updated : Oct 14, 2022, 11:22 AM IST

ಚಿತ್ರದುರ್ಗ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆ ಕೋಟೆ ನಾಡು ಚಿತ್ರದುರ್ಗದಲ್ಲಿ ಸಾಗುತ್ತಿದೆ. ಚಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ, ಕೋನಸಾಗರದ ಮೂಲಕ ಮೊಣಕಾಲ್ಮೂರಿಗೆ ಪಾದಯಾತ್ರೆ ತಲುಪಿದೆ. ಯಾತ್ರೆಯ ದಾರಿ ಉದ್ದಕ್ಕೂ ಜನಸಾಗರ ಕಂಡು ಬಂದಿದೆ.

ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಅವರೊಂದಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಅನೇಕ ನಾಯಕರು ನಡೆಯುತ್ತಿದ್ದಾರೆ. ಯಾತ್ರೆ ಸಾಗುವ ಮಾರ್ಗ ಮಧ್ಯದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಹಲವು ವರ್ಗದ ಜನರು ಸೇರುತ್ತಿದ್ದಾರೆ.

  • #WATCH | Karnataka: Congress MP Rahul Gandhi along with state party president DK Shivakumar and former CM Siddaramiah climbed a water tank to wave the national flag, in Chitradurga district during Bharat Joda Yatra. pic.twitter.com/yXfTHwO2Do

    — ANI (@ANI) October 13, 2022 " class="align-text-top noRightClick twitterSection" data=" ">

ಗಿರಿಯಮ್ಮನಹಳ್ಳಿ ಹಾಗೂ ಕೋನಸಾಗರದಲ್ಲಿ ಪಾದಯಾತ್ರೆ ಸಾಗುವ ಎರಡು ಬದಿಗಳ ದಾರಿ ಉದ್ದಕ್ಕೂ ಸಾಕಷ್ಟು ಜನರು ಸೇರಿದ್ದರು. ಅಲ್ಲದೇ, ಮಹಿಳೆಯರು ಹಾಗೂ ಮಕ್ಕಳು ಪೂರ್ಣಕುಂಭ ಸ್ವಾಗತ ನೀಡಿದರು. ಇದೇ ವೇಳೆ, ಕೋನಸಾಗರಕ್ಕೆ ಸಾಗುವ ವೇಳೆ ಅಲ್ಲಿನ ಕೃಷಿಕರನ್ನು ರಾಹುಲ್​ ಗಾಂಧಿ ಭೇಟಿ ಮಾಡಿದರು.

  • ಭಾರತ ಐಕ್ಯತಾ ಯಾತ್ರೆಯು ಕೋನಸಾಗರಕ್ಕೆ ಸಾಗುವ ವೇಳೆ ಅಲ್ಲಿನ ಕೃಷಿಕರನ್ನು ಭೇಟಿ ಮಾಡಿದ ಶ್ರೀಯುತ @RahulGandhi

    ಈ ವೇಳೆ ಹಿಪ್ಪುನೇರಳೆ ಕೃಷಿ ಬಗ್ಗೆ ಮಾಹಿತಿ ಪಡೆದು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿತುಕೊಂಡರು.#BharatJodoYatra pic.twitter.com/SoBXtXWAQF

    — Karnataka Congress (@INCKarnataka) October 13, 2022 " class="align-text-top noRightClick twitterSection" data=" ">

ಇದನ್ನೂ ಓದಿ: ನಾಳೆಯಿಂದ ಬಳ್ಳಾರಿಯಲ್ಲಿ ಭಾರತ್​ ಜೋಡೋ ಪಾದಯಾತ್ರೆ: ಸಂಚಾರ ಮಾರ್ಗದಲ್ಲಿ ಬದಲಾವಣೆ

ರೈತರ ಹೊಲಕ್ಕೆ ತೆರಳಿ ಹಿಪ್ಪುನೇರಳೆ ಕೃಷಿ ಬಗ್ಗೆ ಮಾಹಿತಿ ಪಡೆದು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ನೀರಿನ ಟ್ಯಾಂಕರ್​ವೊಂದರ ಮೇಲೆ ಹತ್ತಿರ ರಾಹುಲ್​ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರು ಮೇಲಿಂದ ಜನರತ್ತ ತ್ರಿರಂಗ ಧ್ವಜ ಪ್ರದರ್ಶಿಸಿದರು. ಈ ಸಂದಭದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರು ಸಿಳ್ಳೆ ಹಾಗೂ ಕೇಕೆಗಳನ್ನು ಹಾಕಿಸಿ ಜೈಕಾರ ಕೂಗಿದರು.

congress-leader-rahul-gandhis-bharat-jodo-yatra-in-chitradurga
ಚಿಕ್ಕಮಕ್ಕಳಿಂದ ಪೂರ್ಣಕುಂಭ ಸ್ವಾಗತ

ಇನ್ನು, ಶನಿವಾರ ಬಳ್ಳಾರಿ ಜಿಲ್ಲೆಗೆ ಭಾರತ್​ ಜೋಡೋ ಯಾತ್ರೆ ಪ್ರವೇಶಿಸಲಿದೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಭಾರತ್​ ಜೋಡೋ ಯಾತ್ರೆ ನಿಮಿತ್ತ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಾಗೂ ಏಕೈಕ ಸಮಾವೇಶ ಇದಾಗಿದೆ. ಈ ಸಮಾವೇಶದ ಮೂಲಕ ರಾಜ್ಯ ಕಾಂಗ್ರೆಸ್​ ತನ್ನ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಹಿಂದೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿಸುವ ಶಕ್ತಿ ಪ್ರದರ್ಶನ ಮಾಡಲಾಗಿತ್ತು.

ಇದನ್ನೂ ಓದಿ: ಭಾರತ್ ಜೋಡೋದ 33 ಯಾತ್ರಿಗಳಿಂದ ನೇತ್ರದಾನ ವಾಗ್ದಾನ.. ಅಂಗಾಂಗ ದಾನಿಗಳ ಕುಟುಂಬಸ್ಥರೊಂದಿಗೆ ರಾಹುಲ್ ಹೆಜ್ಜೆ

Last Updated : Oct 14, 2022, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.