ETV Bharat / state

ಕುಡಿದು ತೇಲಾಡಿದ ಪಿಡಿಒ, ಕಚೇರಿಗೆ ಇಚ್ಚೆ ಬಂದಂತೆ ರಜೆ: ಗ್ರಾಮಸ್ಥರಿಂದಲೇ ತಾಲೂಕು ಪಂಚಾಯತ್​ಗೆ ದೂರು - ಗ್ರಾಮಸ್ಥರ ದೂರು

ಬಸ್​ ನಿಲ್ದಾಣದಲ್ಲಿ ಕುಡಿದು ತೇಲಾಡಿದ ಗ್ರಾಮಾಭಿವೃದ್ಧಿ ಅಧಿಕಾರಿ - ಅಮಾನತಾದ ಒಂದು ತಿಂಗಳಲ್ಲೇ ಮತ್ತೆ ಅದೇ ಹುದ್ದೆಗೆ ಹಾಜರ್​ - ಗ್ರಾಮಸ್ಥರಿಂದಲೇ ಅಧಿಕಾರಿ ವಿರುದ್ಧ ದೂರು.

Etv Bharatcomplaint-by-villagers-against-suspension-of-village-development-officer
ಎಸ್. ಹನುಮಂತ ಕುಮಾರ್
author img

By

Published : Jan 7, 2023, 7:21 PM IST

ಚಳ್ಳಕೆರೆ(ಚಿತ್ರದುರ್ಗ): ಕರ್ತವ್ಯಕ್ಕೆ ಹೋಗುವ ಮುನ್ನವೇ ಬಸ್ ನಿಲ್ದಾದಲ್ಲಿ ಅಧಿಕಾರಿಯೊಬ್ಬ ಮದ್ಯ ಸೇವಿಸಿ ಮತ್ತಿನಲ್ಲಿ ತೇಲಾಡುವ ದೃಶ್ಯ ಕಂಡು ಬಂದಿದೆ. ಚಳ್ಳಕೆರೆ ತಾಲೂಕಿನ ಬೇಡರೆಡ್ಡಿ ಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಅಭಿವೃದ್ಧಿ ಅಧಿಕಾರಿ ಎಸ್. ಹನುಮಂತ ಕುಮಾರ್ ಮದ್ಯ ಸೇವಿಸಿದ ಅಧಿಕಾರಿ. ಗ್ರಾಪಂ ಕಚೇರಿಗೆ ಕರ್ತವ್ಯಕ್ಕೆ ಹೋಗಲು ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ 11-15ರ ಸಮಾರಿಗೆ ಬಂದಿದ್ದಾರೆ. ಮದ್ಯ ಸೇವಿಸಿದ ಅಮಲಿನಲ್ಲಿ ಬಸ್ ನಿಲ್ದಾಣದಲ್ಲಿ ಮಲಗಿರುವುದು ಕಂಡು ಬಂದಿದೆ. ಸ್ಥಳೀಯರು ಕಂಡು ಎಚ್ಚರಿಸಿದಾಗ ಅಮಲಿನಲ್ಲಿ ತೂರಾಡಿ ಕೊಂಡು ಕಚೇರಿಗೆ ಹೋಗಿದ್ದಾರೆ ಎನ್ನಲಾಗಿದೆ.

ಘನತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆ ವಾಹನ ಬಳಕೆ ಮಾಡದೇ, ಜನ ಸಂಜೀವಿನ ಕ್ರಿಯಾ ಯೋಜನೆ ತಯಾರಿಸದೇ ಇರುವುದು, ಪದೇ ಪದೆ ಕರ್ತವ್ಯಕ್ಕೆ ಗೈರು ಸೇರಿದಂತೆ ವಿವಿಧ ಕಾರಣಕ್ಕೆ 17-9-2022ರಂದು ತಾಲೂಕು ಪಂಚಾಯತ್ ಕಾರ್ಯಾಲಯದಿಂದ ನೋಟಿಸ್ ಜಾರಿಮಾಡಲಾಗಿತ್ತು. ಆದರೆ, ತಾಲೂಕು ಪಂಚಾಯತ್​ ಚಾರಿ ಮಾಡಿದ್ದ ನೋಟಿಸ್​ಗೆ ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಪೂರ್ವಾನುಮತಿ ಪಡೆಯದೇ ಪದೇ ಪದೆ ಅನಧಿಕೃತವಾಗಿ ಗೈರು ಹಾಜರರಾಗುತ್ತಿದ್ದರು ಎನ್ನಲಾಗಿದೆ. 23-9-2022 ರಂದು ಎಸ್. ಹನುಮಂತ ಕುಮಾರ್ ಅವರನ್ನು ಅಂದಿನ ಜಿಪಂ ಸಿಇಒ ಡಾ.ಕೆ. ನಂದಿನಿದೇವಿ ಅಮಾನತು ಮಾಡಿ ಆದೇಶ ಕೂಡಾ ಮಾಡಿದ್ದರು.

ಒಂದೇ ತಿಂಗಳ ಅದೇ ಹುದ್ದೆಗೆ ಸೇರಿದ ಹನುಮಂತ ಕುಮಾರ್: ಪಿಡಿಒ ಹನುಮಂತ ಕುಮಾರ್ ಅವರನ್ನು ಕರ್ತವ್ಯ ಲೋಪದಡಿಯಲ್ಲಿ ಅಮಾನತು ಮಾಡಲಾಗಿತ್ತು. ಸಸ್ಪೆಂಡ್​ ಆಗಿ ಒಂದೇ ತಿಂಗಳಿಗೆ ಮತ್ತೆ ಅದೇ ಗ್ರಾಪಂ ಕಚೇರಿಗೆ ವಿಚಾರಣೆಯನ್ನು ಕಾಯ್ದಿರಿಸಿ ದಿನಾಂಕ 25-10-2022ರಂದು ಅಮಾನತನ್ನು ತೆರವುಗೊಳಿಸಿದ್ದರು. ಬೇಡರಡ್ಡಿಹಳ್ಳಿ ಗ್ರಾಪಂ ಕಚೇರಿಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿತ್ತು ಮತ್ತು ಕೂಡಲೇ ನೌಕರ ಕರ್ತವ್ಯಕ್ಕೆ ಹಾಜರಿಯಾಗುವಂತೆ ಜಿಪಂ ಸಿಇಒ ಡಾ.ಕೆ. ನಂದಿನಿದೇವಿ ಅಮಾನತು ಆದೇಶ ಹಿಂಪಡೆದಿದ್ದರು. ಮತ್ತೇ ಅದೇ ಕಚೇರಿಗೆ ನೇಮಕ ಮಾಡಿ ಆದೇಶವೂ ಆಗಿತ್ತು. ಇದು ಗ್ರಾಮಸ್ಥರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

ಗ್ರಾಮಸ್ಥರ ದೂರು: ಬೇಡರಡ್ಡಿಹಳ್ಳಿ ಗ್ರಾಪಂ ಕಾರ್ಯಾಲಕ್ಕೆ ಪಿಡಿಒ ಎಸ್​. ಹನುಂತ ಕುಮಾರ್ ಕರ್ತವ್ಯಕ್ಕೆ ಸರಿಯಾಗಿ ಬರುತ್ತಿಲ್ಲ ಹಾಗೂ ಮದ್ಯ ಸೇವನೆ ಮಾಡಿ ಬರುತ್ತಾರೆ ಕೂಡಲೇ ಪಿಡಿಒ ವರ್ಗಾವಣೆ ಮಾಡಿ. ಬೇರೆ ಪಿಡಿಒ ನಿಯೋಜನೆ ಮಾಡುವಂತೆ ಗ್ರಾಮಸ್ಥರು ದಿನಾಂಕ 6-1-2023 ರಂದು ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇನ್ನು ಒಂದು ದಿನ ಕಳೆದಿಲ್ಲ ಕರ್ತವ್ಯಕ್ಕೆ ಹೋಗುವ ಮುನ್ನವೇ ನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಮಲಗಿರುವುದು ಗ್ರಾಮಸ್ಥರನ್ನು ಇನ್ನೂ ಕೆರಳಿಸುವಂತೆ ಮಾಡಿದೆ.

ಗ್ರಾಮಾಭಿವೃದ್ಧಿ ಅಧಿಕಾರಿಯೇ ಈ ರೀತಿ ಕರ್ತವ್ಯ ಸರಿಯಾಗಿ ಬರದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ. ಈಗಾಗಲೆ ಚಳ್ಳಕೆರೆ ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡ ಹಳ್ಳಿಗಳು ಸಾಷಕ್ಟು ಅಭಿವೃದ್ಧಿಯಿಂದ ವಂಚಿತವಾಗಿದೆ. ಗ್ರಾಮಗಳ ಸಮಸ್ಯೆ ಕೇಳಲು ಜನಪ್ರತಿನಿಗಳು ಇಲ್ಲವಾಗಿದ್ದು, ಈಗ ಅಧಿಕಾರಿಗಳೂ ಸಹ ಸರಿಯಾಗಿ ಕಚೇರಿಗೆ ಬರದೇ ಕುಡಿದು ತೇಲಾಡಿದರೆ ಹಳ್ಳಿಯ ಜನರ ಸಮಸ್ಯೆ ಕೇಳುವವರು ಯಾರು ಎಂಬ ಪ್ರಶ್ನೆಗಳು ಜನರನ್ನು ಕಾಡುವಂತಾಗಿದೆ. ಕೂಡಲೇ ಗ್ರಾಮಗಳ ಅಭಿವೃದ್ಧಿಗೆ ಉತ್ತಮ ಆಡಳಿತ ನಡೆಸುವ ಅಧಿಕಾರಿಯನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕುಮಟಾ: ಕಂಠಪೂರ್ತಿ ಕುಡಿದು ಶಿಕ್ಷಕನ ರಂಪಾಟ, ಸಾರ್ವಜನಿಕರ ಆಕ್ರೋಶ

'ಶಾಲೆಗೆ ಬಂಕ್ ಹಾಕಿ ಡಾಬಾದಲ್ಲಿ ಶಿಕ್ಷಕರ ಗುಂಡು ಪಾರ್ಟಿ': ಪೋಷಕರ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.