ETV Bharat / state

ದೆಹಲಿಯಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ : ಡಿಸಿ ವಿನೋತ್ ಪ್ರಿಯಾ ಸ್ಪಷ್ಟನೆ - Corona in person from Delhi

ದೆಹಲಿಗೆ ಐಎಎಸ್​ ಕೋಚಿಂಗ್​ಗೆಂದು ಹೋಗಿ ಚಿತ್ರದುರ್ಗಕ್ಕೆ ಬಂದ ಯುವಕನೋರ್ವನಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ
ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ
author img

By

Published : May 29, 2020, 8:18 PM IST

ಚಿತ್ರದುರ್ಗ: ಐಎಎಸ್ ಕೋಚಿಂಗ್​ ತೆಗೆದುಕೊಳ್ಳಲು ದೆಹಲಿಗೆ ಹೋಗಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ, ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಸಕ್ಕರ ಗ್ರಾಮದ ಯುವಕನಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ ತಿಳಿಸಿದ್ದಾರೆ.

ಸಕ್ಕರ ಗ್ರಾಮದ 23 ವರ್ಷದ ವ್ಯಕ್ತಿ (ಪಿ-2584) ಕೋವಿಡ್-19 ವೈರಸ್ ಸೋಂಕಿರುವುದು ದೃಢಪಟ್ಟಿದೆ. ಲಾಕ್​ಡೌನ್ ಸಡಿಲಿಕೆಯಾದ ಬಳಿಕ ಮೇ. 14 ರಂದು ದೆಹಲಿಯಿಂದ ಹೊರಟು ಹುಬ್ಬಳ್ಳಿಗೆ ಮೇ. 15 ರಂದು ಆಗಮಿಸಿದ್ದರು. ಇವರೊಂದಿಗೆ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ, ಮೊಳಕಾಲ್ಮೂರು, ಹೊಳಲ್ಕರೆ ತಾಲೂಕಿನ ಇತರೆ 12 ಜನ ಕೂಡ ಬಂದಿದ್ದರು. ಇವರಲ್ಲಿ ವಿದ್ಯಾರ್ಥಿಗಳು ಹಾಗೂ ವಲಸೆ ಕಾರ್ಮಿಕರು ಇದ್ದರು. ಮೇ. 16 ರಂದು 12 ಜನರ ತಂಡ ಕೆಎಸ್‍ಆರ್​​ಟಿಸಿ ಬಸ್ ಸಂಖ್ಯೆ ಕೆಎ 63 ಎಫ್ 0170 ಮೂಲಕ ಚಿತ್ರದುರ್ಗ ಜಿಲ್ಲೆಗೆ ಬಂದರು.

ದೆಹಲಿಯಿಂದ ಜಿಲ್ಲೆಗೆ ಆಗಮಿಸುತ್ತಿರುವ ಈ ತಂಡದ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದ ಜಿಲ್ಲಾಡಳಿತ, 12 ಜನರನ್ನೂ ಸಂಬಂಧಪಟ್ಟ ತಾಲೂಕಿನ ನಿಗದಿತ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿತ್ತು. ಮೇ. 24 ರಂದು ಎರಡನೇ ಬಾರಿಗೆ ಈ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.

ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ

ಈ 12 ಜನರ ಪೈಕಿ ಧರ್ಮಪುರ ಹೋಬಳಿ ಸಕ್ಕರ ಗ್ರಾಮದ 23 ವರ್ಷದ ವ್ಯಕ್ತಿಗೆ (ಪಿ-2584) ಕೋವಿಡ್-19 ವೈರಸ್ ಸೋಂಕು ಇರುವುದು ಇಂದು ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ ವ್ಯಕ್ತಿಯನ್ನು ಧರ್ಮಪುರ ಬಳಿಯ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.