ETV Bharat / state

ಚಿತ್ರದುರ್ಗ ನಗರ ಪ್ರವೇಶಿಸಲು ಮೈನ್ಸ್ ಲಾರಿಗಳಿಗೆ ನಿರ್ಬಂಧ: ಡಿಸಿ ಆದೇಶ - ಈಟಿವಿ ಭಾರತ್​ ಕನ್ನಡ

ಅದಿರು ಸಾಗಿಸುವ ಲಾರಿಗಳು ನಗರದಲ್ಲಿ ಸಂಚರಿಸುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.

d-c-order
ಡಿಸಿ ಆದೇಶ
author img

By

Published : Jul 31, 2022, 8:54 PM IST

ಚಿತ್ರದುರ್ಗ: ನಗರದಲ್ಲಿ ಸುಗಮ ಸಂಚಾರ, ರಸ್ತೆ ಸಂಚಾರ ನಿಯಂತ್ರಣ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಕಬ್ಬಿಣದ ಅದಿರು ಸಾಗಿಸುವ ಮೈನ್ಸ್ ಲಾರಿಗಳು ನಗರದ ಒಳಗಡೆ ಸಂಚರಿಸದಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ. ಸಾರ್ವಜನಿಕ ಸುಗಮ ಸಂಚಾರ ಕ್ರಮಗೊಳಿಸುವ ದೃಷ್ಟಿಯಿಂದ ಹಾಗೂ ಬೆಳಿಗ್ಗೆ ಶಾಲೆಗೆ ತೆರಳುವ ಮಕ್ಕಳ ಹಿತದೃಷ್ಟಿಯಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮೈನ್ಸ್ ಲಾರಿಗಳಿಗೆ ಚಿತ್ರದುರ್ಗ ನಗರದ ಒಳಗಡೆ ನಿರ್ಬಂಧಿಸಲಾಗಿದೆ.

ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಮಾರ್ಗವಾಗಿ ಬರುವ ಲಾರಿಗಳು, ಮಾಳಪ್ಪನಹಟ್ಟಿ ರಸ್ತೆಯಿಂದ ಕಬ್ಬಿಣದ ಅದಿರು ಸಾಗಿಸುವ ಮೈನ್ಸ್ ಲಾರಿಗಳು ರಾಷ್ಟ್ರೀಯ ಹೆದ್ದಾರಿ-50(ಎ) ಬೈಪಾಸ್​ನಿಂದ ಮುರುಘಾಮಠ ಕ್ರಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 48 ಸೇರಬೇಕು.

ಅಲ್ಲಿಂದ ಸೀಬಾರ ಕಡೆಗೆ ತಿರುಗಿ, ಸೀಬಾರ ಕ್ರಾಸ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ 48 ಬೈಪಾಸ್‍ಗೆ ಸೇರುವುದು ಹಾಗೂ ಭೀಮಸಮುದ್ರ ಕಡೆಯಿಂದ ಬರುವ ಮೈನ್ಸ್ ಲಾರಿಗಳು ಯಾವುದೇ ಕಾರಣಕ್ಕೂ ಭೀಮಸಮುದ್ರ ರಸ್ತೆ, ಹೊಳಲ್ಕೆರೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-48ರ ಹಳೇ ಬೈಪಾಸ್ ಮೂಲಕ ಚಿತ್ರದುರ್ಗ ನಗರವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ : ಸ್ವಾತಂತ್ರ್ಯದ ಅಮೃತಮಹೋತ್ಸವ : 'ಹರ್ ಘರ್ ತಿರಂಗಾ' ಮಳಿಗೆ ತೆರೆದ ಬಿಜೆಪಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.