ಚಿತ್ರದುರ್ಗ: ನಾನು ಮುಖ್ಯಮಂತ್ರಿಯಾಗಿ ಇಂದಿಗೆ ಬಹುಶಃ 103 ದಿನ ಆಗಿದ್ದು, ಆ 103 ದಿನದಲ್ಲಿ ಒಂದು ದಿನವೂ ನನ್ನ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಆಗುತ್ತಿದ್ದಂತೆ ರಾಜ್ಯದಲ್ಲಿ ನೆರೆ ಹೆಚ್ಚಾಯ್ತು. ನೆರೆ ನಿರ್ವಹಣೆ, ರೈತರ ಸಂಕಷ್ಟ ಆಲಿಸಲು ಹೆಚ್ಚಿನ ಸಮಯ ಕೊಟ್ಟಿದ್ದು, ಒಂದೆಡೆ ನೋವು, ಒಂದೆಡೆ ಸಂತೋಷ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೆರೆ ಹಾವಳಿಯಿಂದ 7 ಲಕ್ಷ ಹೆಕ್ಟೇರ್ ಬೆಳೆ ಹಾನಿ, 3.5 ಲಕ್ಷ ಮನೆ ಕುಸಿತ ಆಗಿದೆ. ಕೇಂದ್ರ ಸರ್ಕಾರ ನೀಡಿದ ಎನ್.ಡಿ.ಆರ್.ಎಫ್ ಹಣದ ಜೊತೆ ರಾಜ್ಯ ಸರ್ಕಾರದ ಹಣ ಕೂಡ ಬಳಕೆ ಮಾಡಿದ್ದೇನೆ. ಇನ್ನೂ 3 ಸಾವಿರ ಮನೆಗಳ ನಿರ್ಮಾಣಕ್ಕೆ ತಲಾ ಒಬ್ಬರಿಗೆ 5 ಲಕ್ಷ ರೂಪಾಯಿ ನೀಡಲಾಗುತ್ತಿದ್ದು, ಈಗಾಗಲೇ ನಮ್ಮ ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಬುನಾದಿಗಾಗಿ 1 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.
ಮನೆ ನಿರ್ಮಾಣ ಪೂರ್ತಿ ಆಗೋವರೆಗೂ ಮನೆ ಬಾಡಿಗೆಗೆ 5 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದರು. ರಾಜಕಾರಣದಲ್ಲಿ ಅಪಪ್ರಚಾರ ಸಾಮಾನ್ಯ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.