ಲಕ್ನೋ (ಉತ್ತರ ಪ್ರದೇಶ): ಮೃತ ಭ್ರೂಣವನ್ನು ಪಾರ್ಸೆಲ್ ಮೂಲಕ ಸಾಗಣೆ ಮಾಡಲು ಯತ್ನಿಸಿರುವ ದುಷ್ಕೃತ್ಯ ಕಂಡು ವಿಮಾನ ನಿಲ್ದಾಣದ ಕಾರ್ಗೋ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಲಕ್ನೋನಲ್ಲಿನ ಚೌದರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಏನಿದು ಘಟನೆ: ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಶಿವಭರಣ್ ಯಾದವ್ ಎಂಬ ಡೆಲಿವರಿ ಏಜೆಂಟ್ ಪಾರ್ಸೆಲ್ ಅನ್ನು ಕಾರ್ಗೋ ಲಕ್ನೋದಿಂದ ಮುಂಬೈಗೆ ಪಾರ್ಸೆಲ್ ಬುಕ್ ಮಾಡಿದ್ದಾರೆ. ಲಕ್ನೋದಿಂದ ಮುಂಬೈಗೆ ಪಾರ್ಸೆಲ್ ಬುಕ್ ಆಗಿತ್ತು. ಲಗೇಜ್ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಮೃತ ಮಗುವಿನ ಭ್ರೂಣ ಪತ್ತೆಯಾಗಿದೆ. ಭ್ರೂಣವನ್ನು ನೋಡಿದ ಅಧಿಕಾರಿಗಳು ಗಾಬರಿಕೊಂಡು ಸಿಐಎಸ್ಎಫ್ಗೆ ಕರೆ ಮಾಡಿದ್ದಾರೆ. ಈ ವೇಳೆ ತಕ್ಷಣಕ್ಕೆ ಪಾರ್ಸೆಲ್ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು ಒಂದು ತಿಂಗಳ ಭ್ರೂಣ ಇದಾಗಿದೆ ಎಂದು ತಿಳಿದು ಬಂದಿದೆ. ಕೊರಿಯರ್ ಕಂಪನಿ ಉದ್ಯೋಗಿ ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.
ಐವಿಎಫ್ ಇಂದಿರಾ ನಗರದ ಪ್ರಕ್ರಿಯೆ ವೇಳೆ ನಡೆದ ಈ ಗರ್ಭಪಾತಕ್ಕೆ ಕಾರಣ ಏನು ಎಂಬುದನ್ನು ಅರಿಯಲು ಅವರು ಮುಂಬೈಗೆ ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಆದರೆ, ತಪ್ಪಾಗಿ ಅದು ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿದೆ.
ತಪಾಸಣೆ ವೇಳೆ ಸಿಐಎಸ್ಎಫ್ ಅಧಿಕಾರಿಗಳಿಗೆ ಮಾತನಾಡಿದ ಯಾದವ್, ತಾನು ಲಕ್ನೋದಲ್ಲಿನ ಇಂದಿರಾ ನಗರ್ ಐವಿಎಫ್ ಕೇಂದ್ರದಿಂದ ಮುಂಬೈನ ಕೊಪರ್ ಖೈರಾನೆಯಲ್ಲಿನ ರೂಪಾ ಸೊಲಿಟೈರೆಗೆ ಪಾರ್ಸೆಲ್ ಕಳುಹಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಗರ್ಭಪಾತದ ಪ್ರಕರಣವಾಗಿದೆ. ಗರ್ಭಪಾತಕ್ಕೆ ಕಾರಣ ಏನು ಎಂಬ ಕುರಿತು ತಿಳಿಯಲು ಪಾರ್ಸೆಲ್ ಅನ್ನು ಮುಂಬೈಗೆ ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ. ಇಂತಹ ಪಾರ್ಸೆಲ್‌ಗಳನ್ನು ರವಾನಿಸಲು ಅಗತ್ಯವಾದ ದಾಖಲೆಗಳು ಈ ವೇಳೆ ಕಂಡು ಬಂದಿಲ್ಲ ಎಂದು ವಿಮಾನ ನಿಲ್ದಾಣದ ಉಸ್ತುವಾರಿಗಳು ಈಟಿವಿ ಭಾರತ್ಗೆ ತಿಳಿಸಿದರು.
ಈ ಪಾರ್ಸೆಲ್ ರವಾನೆಗೆ ಬೇಕಾದ ಅಗತ್ಯ ದಾಖಲೆಗಳ ಕೊರತೆ ಹಿನ್ನೆಲೆ ಪಾರ್ಸೆಲ್ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಯಾದವ್ನನ್ನು ಪರೀಕ್ಷೆಗೆ ಒಳಪಡಿಸಲಾಗತ್ತಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: ಕ್ರೀಮ್ ರೋಲ್‌ನಲ್ಲಿ ಕಬ್ಬಿಣದ ರಾಡ್: ಬೇಕರಿ ನಿರ್ವಾಹಕನ ವಿರುದ್ಧ ದಾಖಲಾಯ್ತು ದೂರು