ಚಿತ್ರದುರ್ಗ: ಆನ್ಲೈನ್ನಲ್ಲಿ ಮೊಬೈಲ್ ಬುಕ್ ಮಾಡಿದ್ದ ಯುವಕನಿಗೆ ಫೋನ್ ಬದಲು ಸೋನ್ ಪಾಪ್ಡಿ ಇಟ್ಟು ಕಳುಹಿಸಿದ ಘಟನೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯುವಕನಿಂದ ಮೊಬೈಲ್ ಹಣ ಪಡೆದ ವಂಚಕರು, ಮೊಬೈಲ್ ನೀಡುವ ಬದಲು ಸೋನ್ ಪಾಪ್ಡಿ ಬಾಕ್ಸ್ ನೀಡಿ ಮೋಸ ಮಾಡಿದ್ದಾರೆ. ಗೋಪನಹಳ್ಳಿ ಗ್ರಾಮದ ಯುವಕ ನರಸಿಂಹಮೂರ್ತಿ ಮೋಸಕ್ಕೊಳಗಾದ ಯುವಕ.
ಎರಡು ದಿನಗಳ ಹಿಂದೆ ಕಡಿಮೆ ಬೆಲೆಗೆ ಮೊಬೈಲ್ ಖರೀದಿ ಮಾಡಿ ಆಫರ್ ಇದೆ ಎಂದು ನರಸಿಂಹಮೂರ್ತಿಗೆ ಕರೆ ಬಂದಿದೆ. ತನ್ನ ವಿಳಾಸ ನೀಡಿ ಆನ್ಲೈನ್ನಲ್ಲಿ 1700 ರೂಪಾಯಿ ಹಣ ಪಾವತಿಸಿದ್ದಾನೆ. ಇಂದು ನರಸಿಂಹಮೂರ್ತಿ ವಿಳಾಸಕ್ಕೆ ಕಂಪನಿಯವರು ಮೊಬೈಲ್ ಕಳುಹಿಸುವ ಬದಲು ಸೋನ್ ಪಾಪ್ಡಿ ಇರುವ ಬಾಕ್ಸ್ ಕಳುಹಿಸಿ ಮೋಸ ಮಾಡಿದ್ದಾರೆ ಎನ್ನಲಾಗಿದೆ.