ಚಿತ್ರದುರ್ಗ: ಬರದಿಂದ ತತ್ತರಿದ್ದ ಕೋಟೆನಾಡಿನ ರೈತರಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ವಾಣಿವಿಲಾಸ ಸಾಗರಕ್ಕೆ ಹರಿದು ಬರುವ ಕಾಲ ಸನ್ನಿಹಿತವಾಗಿದೆ.
ಈಗಾಗಲೇ ಶಾಂತಿಪುರದ ಬಳಿ ಇರುವ ಮೊದಲ ಹಂತದ ಲಿಫ್ಟ್ನಲ್ಲಿ ಮೋಟರ್ ಪಂಪ್ ಸ್ಥಿತಿ ಹಾಗೂ ಸಾಮರ್ಥ್ಯದ ವಿಚಾರವಾಗಿ ಕಳೆದ ದಿನ ಅಧಿಕಾರಿಗಳು ನಡೆಸಿದ ಪ್ರಾಯೋಗಿಕ ಪರೀಕ್ಷೆ ಕೊನೆಗೂ ಯಶಸ್ವಿಯಾಗಿದೆ. ಶಾಂತಿ ಪುರದ ಬಳಿ ಇರುವ ಐದು ಪಂಪ್ಗಳ ಪೈಕಿ ಮೊದಲ ಪಂಪ್ನಲ್ಲಿ ಈಗಾಗಲೇ ನೀರನ್ನು ಎತ್ತಲಾಗಿದೆ.
ಉಳಿದ ನಾಲ್ಕು ಪಂಪ್ಗಳನ್ನು ಕ್ರಮೇಣ ಚಾಲನೆಗೆ ಒಳಪಡಿಸಲಾಗಿದೆ. ಇದರಿಂದ ಅನ್ನದಾತರ ಬಹುದಿನಗಳ ಕನಸು ನನಸಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ.