ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ಕುಸಿದಿದ್ದು ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿ ಬಳಿ ಇರುವ ಕಾಲುವೆಯನ್ನು ಕಬ್ಬಿಣ ರಹಿತವಾಗಿ ನಿರ್ಮಾಣ ಮಾಡಲಾಗಿದ್ದು, ಭದ್ರಾ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಗುಣಮಟ್ಟದ ಬಂಡವಾಳ ಬಯಲಾಗಿದೆ. ಅಲ್ಪ ಮಳೆಗೆ ಕಾಲುವೆಯ ಸಿಮೆಂಟ್ ಕೊಚ್ಚಿಹೋಗಿದ್ದು, ಜಾನಕಲ್ಲಿನಿಂದ ದೊಡ್ಡಕಿಟ್ಟದಹಳ್ಳಿ ಸುರಂಗ ಮಾರ್ಗದ ಬಳಿಕ ನಿರ್ಮಾಣಗೊಂಡಿರುವ ತೆರೆದ ಕಾಲುವೆಯಲ್ಲಿ ಅವಘಡ ಸಂಭವಿಸಿದೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಕಾಲುವೆ ನಿರ್ಮಾಣದ ಗುತ್ತಿಗೆ ಪಡೆದ, ಎಸ್ಎನ್ಸಿ ಕಂಪನಿಯನ್ನ ಈ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.