ಚಿತ್ರದುರ್ಗ: ಬಾಂಡ್ರವಿ ಬಳಿಯ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಕರಡಿ ಮರಿ ಪತ್ತೆಯಾಗಿದೆ.
ಕೆಳಗಿಳಿಯಲಾಗದೇ ಮರದಲ್ಲೇ ಪೇಚಾಡುತ್ತಿದ್ದ ಈ ಕರಡಿ ಮರಿಯನ್ನು ಗ್ರಾಮಸ್ಥರು ರಕ್ಷಿಸಿ, ಆರೈಕೆ ಮಾಡಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಬಾಂಡ್ರವಿ ಗ್ರಾಮದಲ್ಲಿ ನಡೆದಿದೆ. ಕರಡಿ ಬಗ್ಗೆ ಮಾಹಿತಿ ತಿಳಿಸಿದರೂ ಸಹ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಅದನ್ನು ರಕ್ಷಿಸಿದ್ದಾರೆ.
ಕರಡಿ ಮರಿಯನ್ನು ಮರದಿಂದ ಇಳಿಸಿ ಆರೈಕೆ ಮಾಡಿದ ಬಳಿಕ ಗ್ರಾಮಸ್ಥರು ಮರಿಯನ್ನು ಕಾಡಿಗೆ ಬಿಟ್ಟು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಆದ್ರೆ ಇಷ್ಟೆಲ್ಲ ಆದ್ರೂ ಅರಣ್ಯ ಇಲಾಖೆ ಸಿಬ್ಬಂದಿ ಬಾರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.