ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡನೆ ಮಾಡಿರುವ ಈ ಬಜೆಟ್ ಮುಂದಾಲೋಚನೆಯ ಬಜೆಟ್ ಆಗಿದೆ.ರೈತರು, ಗ್ರಾಮ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಗ್ಗೆ ಉತ್ತಮ ನಿರ್ಣಯ ಕೈಗೊಳ್ಳಲಾಗಿದ್ದು, ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಬಜೆಟ್ನಲ್ಲಿ ಉತ್ತಮ ಯೋಜನೆ ರೂಪಿಸಲಾಗಿದೆ ಎಂದು ಬಾಬಾ ರಾಮ್ದೇವ್ ಕೇಂದ್ರ ಸರ್ಕಾರದ ಬಜೆಟ್ಅನ್ನು ಪ್ರಶಂಸಿದ್ದಾರೆ.
ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದ ಜಿಹ್ವೇಶ್ವರಾನಂದ ಭಾರತಿ ಶ್ರೀ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಬಜೆಟ್ನಲ್ಲಿ ಕೈಗಾರಿಕೆಗೂ ಉತ್ತೇಜನ ನೀಡಲಾಗಿದ್ದು, ದೇಶದ ಜನರ ನಿರೀಕ್ಷೆ ಮತ್ತು ಸವಾಲುಗಳು ಹೆಚ್ಚಾಗಿವೆ. ಭಾರತದ ಆರ್ಥಿಕತೆ ಹೆಚ್ಚಿಸಲು ತುಂಬಾ ಶ್ರಮಿಸಬೇಕಾಗಿದೆ ಎಂದು ಹೇಳಿದ್ದಾರೆ.