ETV Bharat / state

ಪಕ್ಷ ಬದಲಿಸುವ ಮಾತೇ ಇಲ್ಲ: ವದಂತಿಗೆ ತೆರೆ ಎಳೆದ ಕೈ ಶಾಸಕ ರಘುಮೂರ್ತಿ - Minister Ramesh Jarakiholi

ಕಾಂಗ್ರೆಸ್ ಪಕ್ಷವನ್ನೇ ನಂಬಿದ್ದೇನೆ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿದ್ದೇನೆ. ಪಕ್ಷ ನಿಷ್ಠೆಯಿಂದ ಎಂದಿಗೂ ನಮ್ಮ ಪಕ್ಷದಲ್ಲೇ ಇರುತ್ತೇನೆ. ನನ್ನ ಬಗ್ಗೆ ಹಬ್ಬಿರುವುದೆಲ್ಲಾ ಊಹಾಪೋಹ ಅಷ್ಟೇ ಎಂದು ಹೇಳುವ ಮೂಲಕ ಚಳ್ಳಕೆರೆ ಕೈ ಶಾಸಕ ಟಿ.ರಘುಮೂರ್ತಿ ವದಂತಿಗೆ ತೆರೆ ಎಳೆದರು.

Am not changing the party: Raghu Moorthy clarified rumor
ಪಕ್ಷ ಬದಲಿಸುವ ಮಾತೇ ಇಲ್ಲ: ವದಂತಿಗೆ ಕೈ ಶಾಸಕ ರಘುಮೂರ್ತಿ ತೆರೆ
author img

By

Published : Jun 5, 2020, 3:45 PM IST

ಚಿತ್ರದುರ್ಗ: ಸಚಿವ ರಮೇಶ್ ಜಾರಕಿಹೊಳಿಯವರು ಕಾರಣಾಂತರಗಳಿಂದ ಬಿಜೆಪಿ ಪಕ್ಷಕ್ಕೆ ತೆರಳಿದ್ದು, ಪ್ರಸ್ತುತ ರಾಜ್ಯದ ಸಚಿವರಾಗಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರಗಳನ್ನು ನಾನು ತೆಗೆದುಕೊಳ್ಳಬೇಕೆಂದಿಲ್ಲ ಎಂದು ರಾಜಕೀಯ ವಲಯದಲ್ಲಿ ಮೂಡಿದ್ದ ಗೊಂದಲಗಳಿಗೆ ಚಳ್ಳಕೆರೆ ಕೈ ಶಾಸಕ ಟಿ.ರಘುಮೂರ್ತಿ ತೆರೆ ಎಳೆದರು.

ಕೈ ಶಾಸಕ ರಘುಮೂರ್ತಿ

ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಒಬ್ಬ ಶಾಸಕ ಬಿಜೆಪಿಗೆ ಬರಲಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ಹೇಳಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಚಿವರು ಯಾವ ಉದ್ದೇಶದಿಂದ ಹೀಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ನಿಂತು ಶಾಸಕನಾಗಿದ್ದೇನೆ. ಅದರೆ ನನಗೆ ಪಕ್ಷ ಬದಲಿಸುವ ಯಾವುದೇ ನಿಲುವು ಅಥವಾ ಸಚಿವನಾಗುವ ಆಸೆ ಆಕಾಂಕ್ಷೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷವನ್ನೇ ನಂಬಿದ್ದೇನೆ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿದ್ದೇನೆ. ಪಕ್ಷ ನಿಷ್ಠೆಯಿಂದ ಎಂದಿಗೂ ನಮ್ಮ ಪಕ್ಷದಲ್ಲೇ ಇರುತ್ತೇನೆ. ನನ್ನ ಬಗ್ಗೆ ಹಬ್ಬಿರುವುದೆಲ್ಲಾ ಊಹಾಪೋಹ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.