ಹಾವೇರಿ/ಚಿತ್ರದುರ್ಗ: ಸೈನಿಕರ ಸಮಾಧಿ ಮೇಲೆ ರಾಜಕೀಯ ಮಾಡುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ, ರಾಹುಲ್ ಗಾಂಧಿಯವರದ್ದು ಅಪ್ರಬುದ್ಧ ಹೇಳಿಕೆ ಎಂದು ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಬತ್ತಿಕೊಪ್ಪ ಕ್ರಾಸ್ ಬಳಿ ಮಾತನಾಡಿದ ಅವರು, ರೈತರಿಗೆ ಬರಬೇಕಾದ ಕೃಷಿ ಸಮ್ಮಾನ್ ಹಣ ಆದಷ್ಟು ಬೇಗ ಜಮಾ ಮಾಡಿಸುತ್ತೇನೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 40 ವರ್ಷಗಳ ನಂತರ ತಾಲೂಕಿಗೆ ಮಂತ್ರಿಭಾಗ್ಯ ಸಿಕ್ಕಿದೆ. ರೈತನ ಮಗನಾಗಿ, ಕೃಷಿ ಸಚಿವನಾಗಿ ಬಂದಿದ್ದಕ್ಕೆ ಸಂತೋಷವಾಗುತ್ತಿದೆ ಎಂದರು.
'ನನಗೆ ಜನರ ಜೊತೆ ಇರುವ ಖಾತೆ ಕೊಡಿ ಎಂದಿದ್ದೆ'
ನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ರೈತ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಂತ್ರಿಯಾಗಿ ಮೂರು ದಿನ ಆಗಿದೆ. ಇಲಾಖೆಯನ್ನು ಅರ್ಥಮಾಡಿಕೊಳ್ಳಬೇಕಿದೆ. ಮೂರು ದಿನಗಳಿಂದ ಸಿಎಂ ಹಾಗೂ ಅಧಿಕಾರಿಗಳ ಜೊತೆ ಈಗಾಗಲೇ ಸಭೆ ನಡೆಸಿದ್ದೇನೆ. ರೈತರ ಅನುಕೂಲಕ್ಕಾಗಿ ರಾಜ್ಯದ ರೈತರ ಜೊತೆ ಚರ್ಚಿಸಿದ್ದೇನೆ. ನಾನು ರೈತರ ಕುಟುಂಬದಿಂದ ಬಂದವನು. ರೈತರ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ. ಪೊಲೀಸ್ ಇಲಾಖೆ ಬಿಟ್ಟು, ರಾಜಕೀಯರಂಗಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ರೈತರ ಹೋರಾಟದಲ್ಲಿ ಭಾಗಿಯಾಗಿ 9 ದಿನಗಳ ಕಾಲ ಜೈಲಿನಲಿದ್ದೆ ಎಂದು ಹಳೆ ನೆನಪುಗಳನ್ನು ಸ್ಮರಿಸಿದರು.