ಚಿತ್ರದುರ್ಗ: ವಿಷ ಹಾಕಿ ಬಾಲಕನನ್ನು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಣ್ಣೀಕರಕ್ಕ ಜೀವಾವಧಿ ಶಿಕ್ಷೆಗೊಳಗಾದ ಆರೋಪಿ. ಸಣ್ಣೀಕರಕ್ಕ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸೋಮೇನಹಳ್ಳಿ ಬೈರಾಪುರಹಟ್ಟಿ ನಿವಾಸಿ. ಇದೇ ಗ್ರಾಮದ ಫಿರ್ಯಾದಿಯಾದ ಗಿಡ್ಡಪ್ಪನವರ ಮಗನಿಗೆ ಸಣ್ಣೀಕರಕ್ಕ ಮಗಳನ್ನು ಮದುವೆ ಮಾಡಿಸಲಾಗಿತ್ತು. ಆದರೆ ಆರೋಪಿ ಸಣ್ಣೀಕರಕ್ಕನ ಮಗಳು ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಸೇರಿದ್ದಳು.
ಇನ್ನು ದ್ವೇಷದಿಂದ ಫಿರ್ಯಾದಿಯಾದ ಗಿಡ್ಡಪ್ಪನವರ ಮಕ್ಕಳನ್ನು ಟಾರ್ಗೆಟ್ ಮಾಡಿದ ಆರೋಪಿ ಸಣ್ಣೀಕರಕ್ಕ, ಗಿಡ್ಡಪ್ಪನ ಮಗನಾದ ಅರುಣ್ ಕುಮಾರ್ (4)ಗೆ ವಿಷ ಕುಡಿಸಿದ್ದಾನೆ. ಅರುಣ್ ಕುಮಾರ್ನನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈ ಸಾವಿಗೆ ಸಣ್ಣೀಕರಕ್ಕ ಕಾರಣ ಎಂದು ಆರೋಪಿಸಿ ಮೃತನ ಕುಟುಂಬದವರು ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ವೈ.ವಟವಟಿಯವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.