ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ವಿವೇಕಾನಂದ ನಗರದ ಮೂಡ್ಲಪ್ಪ (35) ಬಂಧಿತ ಆರೋಪಿ. ಕಳೆದ ತಿಂಗಳು ನವೆಂಬರ್19 ರಂದು ಬಟ್ಟೆ ತೊಳೆಯಲು ಹೊರಟಿದ್ದ ಬಾಲಕಿಯನ್ನು ಪುಸಲಾಯಿಸಿ ವಿವೇಕಾನಂದ ನಗರದ ಗುಡ್ಡಕ್ಕೆ ಎಳೆದೊಯ್ದು ಕೈಕಾಲು ಕಟ್ಟಿ ಅತ್ಯಾಚಾರ ಎಸಗಿದ್ದ. ಬಳಿಕ ಯಾರಿಗೂ ಹೇಳದಂತೆ ಆರೋಪಿ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Drugs Case: 2 ಬಾರಿ ನೋಟಿಸ್ ನೀಡಿದ್ರೂ ವಿಚಾರಣೆಗೆ ಬಾರದ ಪ್ರೆಸ್ಟೀಜ್ ಕಂಪನಿ ಸಿಇಒ.. ಮೂರನೇ ಬಾರಿ ನೋಟಿಸ್?