ಚಿತ್ರದುರ್ಗ: 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಾಯಕ ಗೆದ್ದರೆ ಒಂದು ಕುರಿ ಊಟ ಕೊಡುತ್ತೇನೆ ಎಂದು ಭೂತೇಶ್ವರ ಹಾಗೂ ಚೌಡೇಶ್ವರಿ ದೇವಿಗೆ ಹರಕೆ ಹೊತ್ತ ಪತ್ರವನ್ನು ಮಡಿಚಿ ದೇವರ ಮರಕ್ಕೆ ಕಟ್ಟಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಪತ್ರ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಸಲು ಸತೀಶ್ ಅಣ್ಣ ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಬಿ.ಫಾರಂ ಸಿಕ್ಕಿ ಚುನಾವಣೆಯಲ್ಲಿ ಜಯಗಳಿಸಿದರೆ ಸ್ವಾಮಿ ಭೂತಪ್ಪ ಹಾಗೂ ಚೌಡೇಶ್ವರಿ ತಾಯಿ ಕೃಪೆಯಿಂದ ಒಂದು ಭೇಟಿ ಕೊಟ್ಟು ಊಟ ಕೊಡುತ್ತೇನೆ.
ಈ ಬಡ ಭಕ್ತನ ಕೋರಿಕೆಯನ್ನು ನಿಮ್ಮ ಸನ್ನಿಧಿಯಲ್ಲಿ ಈಡೇರಿಸಬೇಕು. ಇಂತಿ ನಿಮ್ಮ ಭಕ್ತರು ಶಿವು, ಕರಿಯಣ್ಣ, ಗಂಗಣ್ಣ ಭೂತಪ್ಪ ಎಂದು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ತೋಟಕ್ಕೆ ಬಂದ ಕೂಲಿ ಸಾವನ್ನಪ್ಪಿದ ವಿಷಯ ತಿಳಿಸಲು ಹೋದ ಮಾಲೀಕನೂ ಸಾವು