ಚಿತ್ರದುರ್ಗ : ಹಿರಿಯೂರು ತಾಲೂಕಿಗೆ ವಸತಿ ಇಲಾಖೆಯಿಂದ 4,448 ಮನೆ ಮಂಜೂರು ಮಾಡಲಾಗಿದೆ. ಇಲ್ಲಿ ಅಲೆಮಾರಿ, ಅರೆ ಅಲೆಮಾರಿಗಳೇ ಹೆಚ್ಚು ವಾಸ ಮಾಡುತ್ತಿದ್ದಾರೆ. ಅವರಿಗಾಗಿಯೇ ಸ್ಥಳೀಯ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ.
ಸೂರಿಲ್ಲದೆ ಹೈರಾಣಾಗಿದ್ದ ಹಿರಿಯೂರಿನ ಬಡ ಜನರಿಗೆ ರಾಜ್ಯ ಸರ್ಕಾರ ಮನೆಗಳನ್ನು ನೀಡುವ ಮೂಲಕ ಆಸರೆಯಾಗಿದೆ. ಚಿತ್ರದುರ್ಗ ಹಾಗೂ ತುಮಕೂರು ವ್ಯಾಪ್ತಿಗೆ ಬರುವ ಹಿರಿಯೂರು ತಾಲೂಕಿಗೆ ದೇವರಾಜ ಅರಸು ವಸತಿ ಯೋಜನೆಯಡಿ 4,448 ಮನೆ ಕಲ್ಪಿಸಲು ರಾಜೀವ್ ಗಾಂಧಿ ನಿಗಮಕ್ಕೆ ಅನುಮೋದನೆ ಕೂಡ ನೀಡಲಾಗಿದೆ.
ಕಳೆದ ಬಾರಿ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ವಸತಿ ಸಚಿವ ಸೋಮಣ್ಣ ಅವರ ಬಳಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಿರಿಯೂರು ನಗರಕ್ಕೆ 2000 ಹಾಗೂ ಗ್ರಾಮೀಣ ಭಾಗಕ್ಕೆ 5000 ಸಾವಿರ ಸೇರಿ ಒಟ್ಟು 7000 ಮನೆಗಳಿಗೆ ಸಚಿವರ ಬಳಿ ಬೇಡಿಕೆ ಇಟ್ಟಿದ್ದರು. ಆದರೆ, ಇದೀಗ 4,448 ಮನೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆಸರೆಯಾಗಿದೆ.