ETV Bharat / state

ಚಿತ್ರದುರ್ಗ: 140 ಮಂದಿಗೆ ಕೊರೊನಾ ದೃಢ : ಸೋಂಕಿತರ ಸಂಖ್ಯೆ 4,299ಕ್ಕೆ ಏರಿಕೆ... - ಚಿತ್ರದುರ್ಗ ಕೋವಿಡ್ 19 ಸುದ್ದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪೈಕಿ ಈಗಾಗಲೆ 2,876 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 1,388 ಸಕ್ರೀಯ ಪ್ರಕರಣಗಳು ಇವೆ.

chitradurga
ಚಿತ್ರದುರ್ಗ
author img

By

Published : Sep 10, 2020, 8:02 PM IST

ಚಿತ್ರದುರ್ಗ: ಜಿಲ್ಲೆಯಲ್ಲಿ 140 ಜನರಿಗೆ ಸೋಂಕು ದೃಢಪಟ್ಟಿದ್ದು, ಪರಿಣಾಮ ಸೋಂಕಿತರ ಸಂಖ್ಯೆ 4,299ಕ್ಕೆ ಏರಿಕೆಯಾದಂತಾಗಿದೆ.

ತಾಲ್ಲೂಕಿನಲ್ಲಿ 58, ಚಳ್ಳಕೆರೆ 36, ಹಿರಿಯೂರು 19, ಹೊಸದುರ್ಗ 21, ಮೊಳಕಾಲ್ಮುರು 04 ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 02 ಸೇರಿದಂತೆ ಒಟ್ಟು 140 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿಂದು 92 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು 770 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ವರದಿಯಲ್ಲಿ 140 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 4,299ಕ್ಕೆ ಏರಿಕೆಯಾಗಿದ್ದು, ಇದುವರೆಗೆ 35 ಜನ ಕೋವಿಡ್‍ನಿಂದ ಮೃತಪಟ್ಟಿದ್ದರೆ, ಇತರೆ ಕಾರಣದಿಂದ ಒಬ್ಬರು ಮೃತಪಟ್ಟಿದ್ದಾರೆ.

ಸೋಂಕಿತರ ಪೈಕಿ ಈಗಾಗಲೆ 2,876 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 1,388 ಸಕ್ರೀಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.