ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ ನಟ ಸಂಚಾರಿ ವಿಜಯ್ ಸಮಾಧಿಗೆ ಕುಟುಂಬಸ್ಥರು ಹಾಲು-ತುಪ್ಪ ಬಿಟ್ಟಿದ್ದಾರೆ.
ವಿಜಯ್ ಸ್ನೇಹಿತ ರಘು ತೋಟದಲ್ಲಿ ಮೂರನೇ ದಿನದ ಈ ಕಾರ್ಯ ನಡೆದಿದ್ದು, ವಿಜಯ್ ಕುಟುಂಬಸ್ಥರು ಭಾಗಿಯಾಗಿದ್ದಾರೆ. ರಘು ಸೇರಿದಂತೆ ಸ್ಥಳೀಯರು, ಸ್ನೇಹಿತರು ಉಪಸ್ಥಿತರಿದ್ದರು.
ಸಂಚಾರಿ ವಿಜಯ್ ಬೈಕ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಜೂನ್ 15ರಂದು ಸಂಚಾರಿ ಕೊನೆಯುಸಿರೆಳೆದಿದ್ದರು.
ಓದಿ:ಕೋವಿಶೀಲ್ಡ್ ಲಸಿಕೆ ಪಡೆದಿದ್ದಕ್ಕೆ ಹಲವು ಕಾಯಿಲೆಗಳು ಗುಣಮುಖವಾದವಂತೆ:ಎಲ್ಲಿ?