ETV Bharat / state

ಕೋವಿಡ್​ ನಿಯಮ ಗಾಳಿಗೆ ತೂರಿ ಕಿಟ್​ಗಾಗಿ ಮುಗಿಬಿದ್ದ ಕಾರ್ಮಿಕರು

ಮೈಕ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಎಚ್ಚರಿಕೆಯನ್ನು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕಿಟ್ ಪಡೆಯಲು ಕಾರ್ಮಿಕರು ಸಾಲುಗಟ್ಟಿ ನಿಂತಿದ್ದು, ಕೊರೊನಾ ಹರಡುವ ಭೀತಿ ಎದುರಾಗಿದೆ..

sringeri
ಕೋವಿಡ್​ ನಿಯಮ ಗಾಳಿಗೆ ತೂರಿ ಕಿಟ್​ಗಾಗಿ ಮುಗಿಬಿದ್ದ ಕಾರ್ಮಿಕರು
author img

By

Published : Jul 12, 2021, 2:04 PM IST

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ತಾಲೂಕು ಪಂಚಾಯತ್ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಗುತ್ತಿದೆ. ಕಾರ್ಮಿಕರು ಕೋವಿಡ್​ ನಿಯಮ ಗಾಳಿಗೆ ತೂರಿ ಕಿಟ್​ಗಾಗಿ ಗುಂಪುಗೂಡಿದ್ದರು.

ಕೋವಿಡ್​ ನಿಯಮ ಗಾಳಿಗೆ ತೂರಿ ಕಿಟ್​ಗಾಗಿ ಮುಗಿಬಿದ್ದ ಕಾರ್ಮಿಕರು

ಶಾಸಕ ಟಿ ಡಿ ರಾಜೇಗೌಡ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಕಿಟ್ ವಿತರಣೆ ಮಾಡಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಟ್ಟಡ ಕಾರ್ಮಿಕರು, ಸಾಮಾಜಿಕ ಅಂತರ ಮರೆತು ಕಿಟ್‌ಗಾಗಿ ಮುಗಿಬಿದ್ದಿದ್ದರು. ಕೆಲವರು ಮಾಸ್ಕ್​ ಕೂಡ ಹಾಕಿರಲಿಲ್ಲ.

ಮೈಕ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಎಚ್ಚರಿಕೆಯನ್ನು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕಿಟ್ ಪಡೆಯಲು ಕಾರ್ಮಿಕರು ಸಾಲುಗಟ್ಟಿ ನಿಂತಿದ್ದು, ಕೊರೊನಾ ಹರಡುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಮಳೆಯ ಅಬ್ಬರಕ್ಕೆ ನದಿಯಂತಾದ ಧರ್ಮಾಶಾಲಾ : ಕೊಚ್ಚಿಹೋದ ಕಾರುಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.