ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿರುವ ಅವಧೂತ ವಿನಯ್ ಗುರೂಜಿ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ವಿಶೇಷವಾದ ಉಡುಗೊರೆಯನ್ನು ಕಳುಹಿಸಿ ಕೊಟ್ಟಿದ್ದಾರೆ.
ಅವಧೂತ ವಿನಯ್ ಗುರೂಜಿ ಅವರು ದತ್ತಾತ್ರೇಯ ಪೀಠ ಗೌರಿಗದ್ದೆ ಶೃಂಗೇರಿಯಲ್ಲಿ ಮಹಾತ್ಮಗಾಂಧಿ ಸೇವಾ ಟ್ರಸ್ಟ್ ವತಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಮೋದಿ ಅವರಿಗೆ ದತ್ತಾತ್ರೇಯರ ಅವರ ಸಂಪೂರ್ಣ ಅನುಗ್ರಹ ಸಿಗಲಿ. ರಾವಣನ ಸಂಹಾರಕ್ಕೆ ರಾಮ ಹೇಗೆ ಶಿವಧನಸ್ಸು ಬಳಸುತ್ತಾನೋ ಅದೇ ರೀತಿ ಭ್ರಷ್ಟಾಚಾರ ತುಂಬಿದ ರಾಜಕೀಯ ಶುದ್ಧಿಗಾಗಿ ಕಳೆದ 8 ವರ್ಷಗಳಿಂದ ಪೂಜೆ ಮಾಡಲಾಗುತ್ತಿರುವ ಬಿಲ್ಲು ಬಾಣವನ್ನು ಮೋದಿ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ.
ಕಳೆದ 8 ವರ್ಷಗಳ ಹಿಂದೆ ದೇಶವನ್ನು ಒಬ್ಬ ಯೋಗಿ ಅಳುತ್ತಾನೆ ಎಂದೂ ಭವಿಷ್ಯ ನುಡಿದಿದ್ದೆ, ಇವತ್ತಿನಿಂದ ಇನ್ನು 8 ವರ್ಷಗಳ ಕಾಲ ರಾಮನ ಇಚ್ಚೆಯಂತೆ ಮೋದಿ ಪರ್ವ ನಡೆಯಲಿದೆ ಎಂದು ಪುನರುಚ್ಛರಿಸಿದರು.