ETV Bharat / state

ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಾಳೆ ಮಹಾ ಕುಂಭಾಭಿಷೇಕ

author img

By

Published : Feb 11, 2023, 6:43 PM IST

ಚಿಕ್ಕಮಗಳೂರ ಜಿಲ್ಲೆಯ ಪ್ರಸಿದ್ಧ ಶೃಂಗೇರಿ ಶಾರದಾ ಪೀಠದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿದೆ.

Various Pooja Programs at Sringeri Sharada Mutt

ಪ್ರಸಿದ್ಧ ಶೃಂಗೇರಿ ಶಾರದಾ ಪೀಠ

ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಶೃಂಗೇರಿ ಶಾರದಾ ಪೀಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಶುಕ್ರವಾರದಿಂದ ಈ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು ಫೆಬ್ರವರಿ 21ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಶೃಂಗೇರಿ ಸಂಸ್ಥಾನದ ವತಿಯಿಂದ ಶ್ರೀ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು, ಮಹಾ ಕುಂಭಾಭಿಷೇಕ ಸೇರಿದಂತೆ ಲಕ್ಷ ಮೋದಕ ಮಹಾಗಣಪತಿ ಹೋಮ, ಅತಿರುದ್ರಾಮಹಾಯಾಗ ಸಂಗಲ್ಪ ಸೇರದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿದೆ.

ಜಗದ್ಗುರು ಶ್ರೀ ಭಾರತೀ ತೀರ್ಥಮಹಾಸ್ವಾಮಿಗಳು ಶ್ರೀ ಭವಾನೀಮಲಹಾನಿಕರೇಶ್ವರ ದೇವರಿಗೆ ರಾಜ ಗೋಪುರವನ್ನು ನಿರ್ಮಾಣ ಮಾಡಿಸಿದ್ದು, ಶುಭಕೃತ್ ಸಂವತ್ಸರದಲ್ಲಿ ಮಾಗ ಕೃಷ್ಣಸಪ್ತಮಿ ದಿನ ಶ್ರೀ ವಿಧು ಶೇಖರಭಾರತಿ ತೀರ್ಥ ಮಹಾಸ್ವಾಮಿಗಳು ಕುಂಭಾಭಿಷೇಕ ನೆರವೇರಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಲೋಕ ಕ್ಷೇಮರ್ಥವಾಗಿ, ಅತಿರುದ್ರ ಮಹಾಯಾಗ, ಚತುರ್ವೇದ ಅಷ್ಟದಶ ಪುರಾಣದಿ ಪಾರಾಯಣಗಳು, ಪಂಚಾಕ್ಷರಿ ಶ್ರೀವಿದ್ಯಾದಿ ಮಹಾಮಂತ್ರಗಳ ಜಪ ಮತ್ತು ಹೋಮ ಸೇರಿದಂತೆ ಮೊದಲಾದ ಕಾರ್ಯಕ್ರಮಗಳು ಜರಗಲಿವೆ. ಭಾನುವಾರ (ಪೆಬ್ರವರಿ 12) ಜಗದ್ಗುರು ಮಹಾಸ್ವಾಮಿಗಳಿಂದ ಶ್ರೀ ಸ್ತಂಭ ಗಣಪತಿಗೆ ಕುಂಭಾಭಿಷೇಕ ನಡೆಯಲಿದೆ. ಬೆಳಗ್ಗೆ 7.30 ರಿಂದ ಶ್ರೀ ಶ್ರೀ ಭವಾನೀಮಲಹಾನಿಕರೇಶ್ವರ ಸನ್ನಿಧಿಯಲ್ಲಿ ಸಹಸ್ರ ಕಲಾಶಭಿಷೇಕ ಆರಂಭಗೊಳ್ಳಲಿದೆ.

ಬಳಿಕ ಶ್ರೀ ಭವಾನಿ ಅಮ್ಮನವರಿಗೆ ಜಗದ್ಗುರು ಮಹಾಸ್ವಾಮಿಗಳಿಂದ ಮಹಾ ಕುಂಭಾಭಿಷೇಕ, ಮಹಾಪೂಜೆ ಮತ್ತು ಮಹಾನೀರಾಜನ ನಡೆಯಲಿದೆ. ಇದಾದ ಬಳಿಕ 9:45ಕ್ಕೆ ವಿಮಾನ ಗೋಪುರ ಮತ್ತು ರಾಜ ಗೋಪುರಗಳ ಕುಂಭಾಭಿಷೇಕ ನಡೆಯಲಿದ್ದು, ಸಂಜೆ ವೇಳೆಗೆ ಮಹಾಸಭಾ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಜಗದ್ಗುರುಗಳ ಅನುಗ್ರಹ ಭಾಷಣ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿ

ಇದೇ ಬುಧವಾರ (ಪೆಬ್ರವರಿ 15) ಶ್ರೀ ಶ್ರೀ ಭವಾನೀಮಲಹಾನಿಕರೇಶ್ವರ ಸ್ವಾಮಿಯ ಮಹಾರಥೋತ್ಸವದ ನಿಮಿತ್ತ ದ್ವಜಾರೋಹಣ ಕಾರ್ಯಕ್ರಮವು ಜರುಗಲಿದೆ. ಪೆಬ್ರವರಿ 17ರಂದು ವಿದ್ಯಾಶಂಕರ ದೇವರು ಶ್ರೀ ಭವಾನೀಮಲಹಾನಿಕರೇಶ್ವರ ಬೆಟ್ಟಕ್ಕೆ ಚಿತ್ತೈಸುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಪೆಬ್ರವರಿ 18ರಂದು ಮಹಾ ಶಿವರಾತ್ರಿಯ ಬೆಳಗ್ಗೆ 7ರಿಂದ ಜಗದ್ಗುರು ಶ್ರೀ ಶಂಕರಾಚಾರ್ಯರ ಸನ್ನಿಧಿಯಲ್ಲಿ ಶತಾರುದ್ರಾಭಿಷೇಕ ನಡೆಯಲಿದೆ.

ಮಧ್ಯಾಹ್ನದ ವೇಳೆಗೆ ಶ್ರೀ ಶ್ರೀ ಭವಾನೀಮಲಹಾನಿಕರೇಶ್ವರ ಸನ್ನಿಧಿಯಲ್ಲಿ ಜಗದ್ಗುರುಗಳಯಿಂದ ಮಹಾಪೂಜೆ ಸಹ ಹಮ್ಮಿಹೊಳ್ಳಲಾಗಿದೆ. ಅದಕ್ಕೂ ಮುನ್ನ ಜಗದ್ಗುರುಗಳ ಗುರು ನಿವಾಸದಲ್ಲಿ ಬೆಳಗ್ಗೆ 6:30ರಿಂದ ಚಂದ್ರ ಮೌಳೇಶ್ವರ ಸ್ವಾಮಿಗೆ ಚಾತುರ್ಯಾಮ ಪೂಜೆ ನಡೆಯಲಿದೆ.

ಪೆಬ್ರವರಿ 20 ರಂದು ಶ್ರೀ ಭವಾನೀಮಲಹಾನಿಕರೇಶ್ವರ ಸ್ವಾಮಿಗೆ ಲಕ್ಷ ಮಲ್ಲಿಕಾರ್ಚನೆ, ಜಗದ್ಗುರುಗಳ ಉಪಸ್ಥಿತಿಯಲ್ಲಿ ಮಹಾನ್ ರಾಜಸನ ಮಹಾನೀರಾಜನ ಪ್ರಾರ್ಥನೆ, ರಥಾರೋಹಣ ಹಾಗೂ ಸಂಜೆ ಮಹಾ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಕೊನೆಯ ದಿನಾಚದ ಪೆಬ್ರವರಿ 21 ರಂದು ಬೆಳಗ್ಗೆ ಓಕಳಿ ಉತ್ಸವ, ಅವಬ್ರುತ ಸ್ನಾನ, ಜಗದ್ಗುರುಗಳ ಸಾನಿಧ್ಯದಲ್ಲಿ ಅತಿರುದ್ರ ಮಹಾಯಾಗದ ಪೂರ್ಣಾವತಿ, ಸಂಜೆ ಶ್ರೀ ಭವಾನೀಮಲಹಾನಿಕರೇಶ್ವರ ದೇವರ ಸಂಧಾನೋತ್ಸವ, ತೆಪ್ಪೋತ್ಸವ ಹಾಗೂ ದ್ವಜಾರೋಹಣ ಕಾರ್ಯಕ್ರಮ ಜರುಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಪ್ರಶಾಂತ್ ಆಗಿದ್ದ ರಿಷಬ್​ ಈಗ ಪ್ಯಾನ್​ ಇಂಡಿಯಾ ಸ್ಟಾರ್​​...ಶೆಟ್ರ ಮೇಲಿದೆ ದೊಡ್ಡ ಜವಾಬ್ದಾರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.