ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಶಾರದಾ ಪೀಠದಲ್ಲಿರುವ ತುಂಗಾ ನದಿ ತೀರದಲ್ಲಿ, ತುಂಗಾ ಪುಷ್ಕರ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.
ತುಂಗಾ ನದಿಯ ತಟದಲ್ಲಿ ಈ ಮಹೋತ್ಸವ ನಡೆಯುತ್ತಿದ್ದು, ತುಂಗಾ ನದಿಗೆ ನಾಲ್ಕು ಮಂದಿ ಪುರೋಹಿತರು ತುಂಗಾ ಆರತಿ ಮಾಡುವುದರ ಮೂಲಕ ಈ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮ ಡಿಸೆಂಬರ್ 1ರ ತನಕ ನಡೆಯಲಿದ್ದು, ಲೋಕ ಕಲ್ಯಾಣಾರ್ಥಕವಾಗಿ ತುಂಗಾ ಪುಷ್ಕರ ಮಹೋತ್ಸವ ನಡೆಸಲಾಗುತ್ತಿದೆ.
ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಬೆಳಗ್ಗೆ-ಸಂಜೆ ಈ ಮಹೋತ್ಸವ ನಡೆಯುತ್ತಿದ್ದು, ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ, ಹಾಗೂ ವಿಧುಶೇಖರ ಶ್ರೀಗಳ ಆದೇಶದಂತೆ ಮಹೋತ್ಸವ ಪ್ರಾರಂಭವಾಗಿದೆ. 11 ದಿನಗಳ ಕಾಲ ತುಂಗಾ ನದಿಯಲ್ಲಿ ದೇವರುಗಳ ತೆಪ್ಪೋತ್ಸವ ಕೂಡ ನಡೆಯಲಿದ್ದು, ದಕ್ಷಿಣಾಮಾಯ ಶೃಂಗೇರಿ ಶಾರದಾ ಪೀಠದಲ್ಲಿ ತುಂಗಾ ಪುಷ್ಕರ ವಿಶೇಷವಾಗಿ ಪ್ರಾರಂಭವಾಗಿದೆ.