ಚಿಕ್ಕಮಗಳೂರು: ಜಿಲ್ಲೆಯೂ ಹಸಿರು ವಲಯದಲ್ಲಿದ್ದು, ಲಾಕ್ಡೌನ್ ಸಂಪೂರ್ಣ ಸಡಿಲಿಕೆ ಆಗಿಲ್ಲ. ರಸ್ತೆಯಲ್ಲಿ ಬೇಕಾ ಬಿಟ್ಟಿ ಓಡಾಡಿದ್ರೆ, ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ.
ಸುಮ್ಮನೆ ಓಡಾಡುವ ವಾಹನಗಳ ಓಡಾಟಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಬ್ರೇಕ್ ಹಾಕಿದ್ದು, ಅವಶ್ಯಕತೆ ಇರುವವರಿಗೆ ಮಾತ್ರ ವಾಹನದಲ್ಲಿ ಓಡಾಡೋಕೆ ಅವಕಾಶ ಮಾಡಿಕೊಟ್ಟಿದೆ. ಸಣ್ಣ ಕೈಗಾರಿಕೆ ಕೆಲಸಗಳಿಗೆ, ಗ್ರಾಮೀಣ ಪ್ರದೇಶದ ಕೈಗಾರಿಕಾ ಕೆಲಸಕ್ಕೆ ಹೋಗುವವರು ಐಡಿ ಕಾರ್ಡ್, ಸಾಮಾಜಿಕ ಅಂತರ, ಮಾಸ್ಕ್ ಬಳಸಿ ಕೆಲಸ ಮಾಡಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸರ್ಕಾರದ ಅನುಮತಿ ಇರುವ ಅಂಗಡಿಗಳ ಓಪನ್ಗೆ ಅನುಮತಿ ನೀಡಿದ್ದು, ಹೊರ ಭಾಗದ ಕಾರ್ಮಿಕರು ಎಸ್ಪಿ ಅವರ ಅನುಮತಿ ಪಡೆದು ಬರಬೇಕು. ಸಲೂನ್, ಜ್ಯುವೆಲ್ಲರಿ ಸೇರಿದಂತೆ ಪಾನ್-ಗುಟ್ಕಾ ಶಾಪ್ಗಳಿಗೆ ಅನುಮತಿ ಇಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಾಕ್ಡೌನ್ ಸಂಪೂರ್ಣ ಸಡಿಲಿಕೆ ಆಗಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.