ಚಿಕ್ಕಮಗಳೂರು: ತರೀಕೆರೆ ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಗೋಪಿಕೃಷ್ಣ ತಮ್ಮ 48ನೇ ಹುಟ್ಟುಹಬ್ಬವನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
20,000 ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ, ತಾಲೂಕಿನ ರೋಗಿಗಳಿಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಎಲ್ಲಾ ಸೌಲಭ್ಯವುಳ್ಳ ಆ್ಯಂಬುಲೆನ್ಸ್, 1,000ಕ್ಕೂ ಹೆಚ್ಚು ಆಟೋ ಚಾಲಕರಿಗೆ ಯೂನಿಫಾರ್ಮ್ ಹಾಗೂ 2,000ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಕೊಡೆಗಳನ್ನು ಅವರು ವಿತರಿಸಿದ್ದಾರೆ. ಕೋವಿಡ್ ಅಬ್ಬರದ ಸಂದರ್ಭದಲ್ಲೂ ತರೀಕೆರೆ ತಾಲೂಕಿಗೆ ಇವರು 4 ಆ್ಯಂಬುಲೆನ್ಸ್ ನೀಡಿದ್ದರು.
''ನಾನು ಯಾವುದೇ ದುರುದ್ದೇಶದಿಂದ ಈ ರೀತಿಯ ಕೆಲಸಗಳನ್ನು ಮಾಡುತ್ತಿಲ್ಲ. ಕಡು ಬಡತನ ಹಾಗೂ ಎಲ್ಲಾ ರೀತಿಯ ಕಷ್ಟಗಳನ್ನು ನೋಡಿದ್ದೇನೆ. ದೇವರು ಇತರರ ಸಮಸ್ಯೆಗೆ ಸ್ಪಂದಿಸುವ ಶಕ್ತಿಯನ್ನು ನನಗೆ ಸ್ವಲ್ಪ ನೀಡಿದ್ದಾನೆ. ಹಾಗಾಗಿ ಸಮಾಜ ಸೇವೆ ಮಾಡುತ್ತಿದ್ದೇನೆ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: 'ನನ್ನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ'