ಚಿಕ್ಕಮಗಳೂರು: ರ‍್ಯಾಲಿ ಆಫ್ ಚಿಕ್ಕಮಗಳೂರು ಎಂಬ ಶೀರ್ಷಿಕೆಯಡಿ ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಎರಡು ದಿನದ ಮೋಟಾರ್ ಸ್ಪೋರ್ಟ್ ರ‍್ಯಾಲಿ ಯಶಸ್ವಿಯಾಗಿ ನಡೆದಿದೆ.
ಚಿಕ್ಕಮಗಳೂರು ನಗರದಿಂದ ಶುರುವಾದ ಈ ರ‍್ಯಾಲಿಯಲ್ಲಿ ರಾಜ್ಯ, ಹೊರ ರಾಜ್ಯಗಳ 30ಕ್ಕೂ ಹೆಚ್ಚು ಕಾರುಗಳು ಭಾಗವಹಿಸಿದ್ದವು. ರ‍್ಯಾಲಿಗೂ ಮುನ್ನ ಈ ಸ್ಪರ್ಧಿಗಳಿಗೆ ಎಲ್ಲಿ ಹೋಗಬೇಕು, ಹೇಗೆ ಹೋಗಬೇಕು ಎಂಬ ಸುಳಿವು ಇರುವುದಿಲ್ಲ. ಕೇವಲ ಒಂದೇ ಒಂದು ನಿಮಿಷದ ಮುಂಚೆ ಇವರಿಗೆ ರೂಟ್ ಮ್ಯಾಪ್ಗಳನ್ನ ಆಯೋಜಕರು ನೀಡುತ್ತಾರೆ.
ರೂಟ್ ಮ್ಯಾಪ್ನಲ್ಲಿ ಯಾವ ಗಮ್ಯ ತಲುಪಬೇಕು, ಯಾವ ದಾರಿಯಲ್ಲಿ ಹೋಗಬೇಕು, ಎಲ್ಲೆಲ್ಲಿ, ಎಷ್ಟೆಷ್ಟು ವೇಗದಲ್ಲಿ ಹೋಗಬೇಕು ಎಂಬ ಮಾಹಿತಿ ಸಿಗುತ್ತದೆ. ಇದನ್ನು ಆಧರಿಸಿ ಸವಾರರು ಕಾರು ಡ್ರೈವ್ ಮಾಡಿದರು. ಅಲ್ಲಲ್ಲಿ ಚೆಕ್ ಪಾಯಿಂಟ್ಗಳಿದ್ದು, ಎಷ್ಟು ಸಮಯಕ್ಕೆ ಗಮ್ಯ ಸೇರಿದರು. ವಾಹನ ವೇಗವಾಗಿ ಚಾಲನೆ ಮಾಡಿದರಾ.? ಆಲಸ್ಯವಾಗಿ ಬಂದರಾ..? ಎಂಬುದನ್ನು ಇಲ್ಲಿ ಗಮನಿಸಲಾಗುತ್ತದೆ.
ಇದನ್ನೂ ಓದಿ..ಮಲೆನಾಡಿನಲ್ಲಿ ಜೀಪ್ ರ‍್ಯಾಲಿ.. ಹಳ್ಳ, ಕಾಡು, ತೋಟಗಳಲ್ಲಿ ಮೈಕೊಡವಿ ನುಗ್ಗಿದ ವಾಹನಗಳು!
ರಾಜ್ಯ ಹೆದ್ದಾರಿ, ರಾಷ್ಟ್ಟೀಯ ಹೆದ್ದಾರಿ ಸೇರಿದಂತೆ ಹಳ್ಳಿ ರಸ್ತೆಗಳಲ್ಲೂ ರ‍್ಯಾಲಿ ಸಾಗಿತು. ಕೇವಲ ಪುರುಷರು ಮಾತ್ರವಲ್ಲದೇ ಮಹಿಳೆಯರು ಕೂಡ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಕಾಫಿನಾಡಿನಲ್ಲಿ ನಡೆದ ಈ ಮೋಟಾರ್ ಸ್ಪೋರ್ಟ್ ರ‍್ಯಾಲಿಯನ್ನು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದು ವಿಶೇಷವಾಗಿತ್ತು.