ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನಲ್ಲಿ ಜೆಡಿಎಸ್ಗೆ ವೈಎಸ್ವಿ ದತ್ತ ಗುಡ್ ಬೈ ಹೇಳ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಎಪಿಎಂಸಿ ಮಾಜಿ ಅಧ್ಯಕ್ಷ, ದತ್ತರ ಆಪ್ತರ ಆಡಿಯೋ ಒಂದು ವೈರಲ್ ಆಗುತ್ತಿದ್ದು ಇದರಲ್ಲಿ ಪಕ್ಷ ಬಿಡುವ ಬಗ್ಗೆ ಸಂಭಾಷಣೆ ಆಗಿದೆ ಎನ್ನಲಾಗಿದೆ.
ದತ್ತ ಕಾಂಗ್ರೆಸ್ ಸೇರುವುದರಿಂದ ಕೈ ಪಾಳೆಯದಲ್ಲಿ ಮೂಲ ಮತ್ತು ವಲಸಿಗರ ಕಲಹ ಆರಂಭವಾಗುವುದಂತೂ ಖಂಡಿತಾ. ದತ್ತ ಅವರು ನಾಳೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೇರ್ಪಡೆ ಬಗ್ಗೆ ಚರ್ಚೆ ಮಾಡಲಿದ್ದು, ಇದೇ ತಿಂಗಳ 17 ರಂದು ಬೆಳ್ತಂಗಡಿಯಲ್ಲಿ ಸಿದ್ದು ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ದತ್ತ ಅವರು ಕಾಂಗ್ರೆಸ್ ಸೇರುವುದರಿಂದ ಅಲ್ಲಿ ಒಳ ಜಗಳಗಳು ಆಗುವುದು ಖಂಡಿತ, ಆದರೆ, ಬಿಜೆಪಿ ಕಾಂಗ್ರೆಸ್ ನಡುವೆ ಚುನಾವಣೆಯಲ್ಲಿ ಫೈಟ್ ಜೋರಾಗಲಿದೆ. ಒಟ್ಟಿನಲ್ಲಿ ಈ ಬಗ್ಗೆ ಕಡೂರು ಕ್ಷೇತ್ರದಲ್ಲಿ ಚರ್ಚೆಗಳು ಆಗುತ್ತಿದೆ. ಯಾವುದೇ ಅಧಿಕೃತ ಮಾಹಿತಿ ಇಲ್ಲದ ಕಾರಣ ಎಲ್ಲವನ್ನೂ ಕಾದು ನೋಡ ಬೇಕಿದೆ.
ಇದನ್ನೂ ಓದಿ: ವಿಧಾನಸಭೆಗೆ ಸ್ಪರ್ಧಿಸಲು ಕೈ, ಕಮಲದಲ್ಲಿ ಹಾಲಿ-ಮಾಜಿ ಸಂಸದರುಗಳ ಟಿಕೆಟ್ ಲಾಬಿ