ಚಿಕ್ಕಮಗಳೂರು: ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ ಮುಂದುವರೆದಿದೆ.
ಸಿದ್ದರಾಮಯ್ಯನವರು ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದವನು ಎಂದು ಹೇಳುತ್ತಾರೆ. ಅವರು ಹಾಕೋದೆಲ್ಲಾ ಮೂರು, ನಾಲ್ಕು, ಐದು ಲಕ್ಷದ ಗ್ಲಾಸ್ಗಳು. ವಾಚು 50,60 ಲಕ್ಷದ್ದು, ಓಡಾಡೋ ಕಾರುಗಳು ಒಂದೂವರೇ ಎರಡು ಕೋಟಿಯದ್ದು. ಆದರೂ ಅವರು ಸಮಾಜವಾದಿ ಹಿನ್ನೆಲೆಯವರು ಸಿದ್ದರಾಮಯ್ಯನವರು ನಿಜಕ್ಕೂ ಪುಣ್ಯವಂತರೇ ಅವರಿಗೆ ಯಾವ್ಯಾವ ರೀತಿ ಸ್ನೇಹಿತರಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ರು.
ಕೋಟಿಗಟ್ಟಲೇ ಹಣ ಕೊಡುವ ಸ್ನೇಹಿತರನ್ನು ಹೊಂದಿದ್ದಾರೆ. ಕೋಟಿಗಟ್ಟಲೇ ವಾಚು ಕೋಡೋ ಸ್ನೇಹಿತ, ಲಕ್ಷಗಟ್ಟಲೇ ಕನ್ನಡಕ ಕೊಡುವ ಸ್ನೇಹಿತ ಕೋಟಿಗಟ್ಟಲೇ ಕಾರು ಗಿಫ್ಟ್ ಕೋಡೋ ಸ್ನೇಹಿತ ಇದ್ದಾರೆ ಎಂದು ಹೇಳುವ ಮೂಲಕ ಅವರ ಮೇಲೆ ಸಿಟಿ ರವಿ ವ್ಯಂಗ್ಯವಾಡಿದ್ರು.
ಪಾರ್ಲಿಮೆಂಟ್ನಲ್ಲಿ ಒಟ್ಟಾಗಿ ಚುನಾವಣೆ ಎದುರಿಸಿದ್ದರು. ನಮ್ಮನ್ನು ಸಿಂಗಲ್ ನಂಬರ್ಗೆ ತರುತ್ತೇವೆ ಎಂದು ಹೇಳಿದ್ದರು. ಯಾರಿಗೆ ಈಗ ಸಿಂಗಲ್ ನಂಬರ್ ಬಂದಿರೋದು?. ರಾಜ್ಯದ ಜನರು ಬುದ್ಧಿವಂತರಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಬಿಜೆಪಿ ಸರ್ಕಾರ ಬೀಳಲು ಬಿಡೋದಿಲ್ಲ ಎಂದು ಹೇಳಿದ್ದಾರೆ. ಅದರ ಅರ್ಥ 15ಕ್ಕೆ 15 ಕ್ಷೇತ್ರಗಳಲ್ಲಿ ಬಿಜೆಪಿ ಬರುತ್ತದೆ ಎಂಬುದು ಅವರ ಭಾವನೆಯಾಗಿದೆ ಎಂದರು.
ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭ:
ರಾಜ್ಯ ಬಿಜೆಪಿ ರಾಜ್ಯಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ನಗರದ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತ ಮಾಡಿ ಕರೆ ತಂದರು.