ಚಿಕ್ಕಮಗಳೂರು: ತೇಜಸ್ವಿ ಸೂರ್ಯ ಜೊತೆ ಮಾತನಾಡಿದ ಆಡಿಯೋ ವೈರಲ್ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಿಗೆ ಕೋಕ್ ನೀಡಲಾಗಿದೆ. ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಹರವಿನಗಂಡಿ ಅವರನ್ನ ಬಿಜೆಪಿ ಬದಲಾವಣೆ ಮಾಡಿದ್ದು, ನೂತನ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಸಂತೋಷ್ ಕೋಟ್ಯಾನ್ ನೇಮಕ ಮಾಡಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಸಂದೀಪ್ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲೇ ಮೊದಲ ಬಾರಿಗೆ ರಾಜೀನಾಮೆ ಧ್ವನಿಯನ್ನು ಇವರು ಎತ್ತಿದ್ದರು. ಈ ವೇಳೆ ರಾಜೀನಾಮೆ ಹಿಂಪಡೆಯುವಂತೆ ಸಂದೀಪ್ಗೆ ತೇಜಸ್ವಿ ಸೂರ್ಯ ಕರೆ ಮಾಡಿದ್ದರು. ಮಾತುಕತೆ ವೇಳೆ ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯ ಬಹುದಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ್ದರು.
ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆಡಿಯೋ ಸಂಭಾಷಣೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವೈರಲ್ ಆಡಿಯೋದಿಂದ ಸಂಸದ ತೇಜಸ್ವಿ ಸೂರ್ಯ ಮುಜುಗರಕ್ಕೆ ಒಳಗಾಗಿದ್ದರು. ಇದೀಗ ದಿಢೀರ್ ಬದಲಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆ ಅಂಗೀಕಾರವಿಲ್ಲ, ಮನವೊಲಿಕೆಗೆ ಯತ್ನ: ಡಾ.ಸಂದೀಪ್