ETV Bharat / state

ಚಿಕ್ಕಮಗಳೂರು: ರಾಜಸ್ಥಾನಿ ಹುಡ್ಗೀರ ಗ್ಯಾಂಗ್​ನಿಂದ ಬಿಕ್ಷಾಟನೆ..

ಪ್ರಕೃತಿ ವಿಕೋಪದಲ್ಲಿ ನಮ್ಮ ಮನೆ, ಆಸ್ತಿ ಪಾಸ್ತಿ ಹಾನಿಯಾಗಿದೆ. ಹೀಗಾಗಿ ನಮಗೆ ಹಣವನ್ನು ನೀಡಿ ಎಂದು ರಾಜಸ್ಥಾನಿ ಮೂಲದ ಹುಡುಗಿಯರ ಗುಂಪು ಸಾರ್ವಜನಿಕರಿಂದ ಹಣವನ್ನು ಕೀಳಲು ಮುಂದಾಗಿದೆ.

author img

By

Published : May 25, 2023, 9:22 PM IST

Updated : May 25, 2023, 9:48 PM IST

ರಾಜಸ್ಥಾನಿ ಹುಡ್ಗೀರ ಗ್ಯಾಂಗ್​ನಿಂದ ಬಿಕ್ಷಾಟನೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀಡು ಬಿಟ್ಟಿರುವ ಸುಮಾರು 15 ಕ್ಕೂ ಅಧಿಕ ರಾಜಸ್ಥಾನಿ ಹುಡುಗಿಯರ ಗುಂಪು ನಗರದಾದ್ಯಂತ ನಾವು ಅನಾಥರು, ಮನೆಯನ್ನು ಕಟ್ಟಿಕೊಳ್ಳಲು ಹಣ ನೀಡಿ ಎಂದು ಭಿಕ್ಷಾಟನೆ ಮಾಡುತ್ತಿರುವುದು ಕಂಡು ಬಂದಿದೆ.

ಹೈಫೈ ಜೀನ್ಸ್‌ ಪ್ಯಾಂಟ್‌, ಟೈಟ್‌ ಟೀ ಶರ್ಟ್‌ ಹಾಕೊಂಡು ರಸ್ತೆಗಿಳಿಯೋ ಹುಡ್ಗೀರು ಪ್ರಕೃತಿ ವಿಕೋಪದಲ್ಲಿ ನಮ್ಮ ಮನೆ, ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಹಣ ನೀಡುವಂತೆ ಅನುಕಂಪದಿಂದಲೇ ಡಿಮ್ಯಾಂಡ್‌ ಮಾಡ್ತಾರೆ. ನಂತರ ಜನರು 10-20 ರೂ. ಕೊಟ್ಟರೆ ತೆಗೆದುಕೊಳ್ಳದೇ 100- 200 ರೂ. ಕೊಡುವಂತೆ ದುಂಬಾಲು ಬೀಳ್ತಾರೆ. ದುಡಿಯೋಕೆ ನೂರು ದಾರಿಗಳಿದ್ದರೂ ಸೋಮಾರಿ ಮನಸ್ಸು ಸುಲಭವಾಗಿ ಹಣಗಳಿಸುವ ಮಾರ್ಗದ ದಾರಿಯನ್ನೇ ಹಿಡಿದಿದ್ದಾರೆ.

ಮನೆ-ಮನೆಗೆ ಹೋಗಿ ಭಿಕ್ಷಾಟನೆ ಮಾಡುತ್ತಿರುವ ರಾಜಸ್ಥಾನಿ ಹುಡುಗಿಯರು: ನೋಡುವುದಕ್ಕೆ ಶಿಕ್ಷಣ ಪಡೆದವರ ರೀತಿ ಇರುವ ರಾಜಸ್ಥಾನಿ ಹುಡುಗಿಯರ ಗುಂಪು, ನಾವು ಅನಾಥರು ಎಂದು ಹೇಳಿಕೊಂಡು ಚಿಕ್ಕಮಗಳೂರು ನಗರ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಭಿಕ್ಷಾಟನೆಗೆ ಮುಂದಾಗಿದ್ದಾರೆ. ಬಸ್‌ ನಿಲ್ದಾಣ, ಮಾರುಕಟ್ಟೆಗಳು, ಪ್ರಮುಖ ಬೀದಿಗಳು ಹಾಗೂ ಮನೆ-ಮನೆಗೆ ಹೋಗಿ ಭಿಕ್ಷಾಟನೆ ಮಾಡುತ್ತಿದ್ದು, ಅವರ ಮೇಲೆ ಅನುಮಾನ ಹುಟ್ಟಿಸುವಂತಿದೆ.

ಸುಮಾರು 12 ವರ್ಷದಿಂದ 25 ವರ್ಷದ ಆಸುಪಾಸಿನ 15 ಕ್ಕೂ ಅಧಿಕ ಹುಡುಗಿಯರು ನಗರದಾದ್ಯಂತ ಭಿಕ್ಷಾಟನೆ ಮಾಡುತ್ತಿರುವುದು ಕಂಡು ಬರುತ್ತಿದೆ. ನಗರದಲ್ಲಿ ಸ್ಟ್ರೈಲಾಗಿ ಡ್ರೆಸ್ ಮಾಡ್ಕೊಂಡು ಬಂದು ಹಣ ವಸೂಲಿ ಮಾಡ್ತಿರೋ ಲೇಡಿಸ್ ಬ್ಯಾಚ್, ಚಿಕ್ಕಮಗಳೂರು ನಗರದ ಮನೆ-ಅಂಗಡಿಗಳಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.

ಪ್ರಕೃತಿ ವಿಕೋಪದಿಂದ ಮನೆ ಹಾನಿಯಾಗಿರುವ ಬಗ್ಗೆ ಪತ್ರ

ಕನ್ನಡ ಮಾತನಾಡಲು ಬರದ ಇವರು ಆಸ್ತಿ-ಪಾಸ್ತಿ ಹಾನಿಯಾಗಿದೆ ಎಂದು ಇಂಗ್ಲೀಷ್‌ನ ಒಂದು ಪ್ಯಾರಾವನ್ನು ಜೆರಾಕ್ಸ್‌ ಮಾಡಿಸಿಕೊಂಡು ತಮ್ಮ ಬಳಿಯಲ್ಲಿ ಇಟ್ಟುಕೊಂಡಿದ್ದಾರೆ. ಎಲ್ಲರೂ ಇಂಗ್ಲೀಷ್‌ ಮುದ್ರಣದ ಪ್ರತಿಯನ್ನು ತೋರಿಸಿ ಹಿಂದಿ ಮತ್ತು ರಾಜಸ್ಥಾನಿ ಭಾಷೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರನ್ನು ಡ್ರಗ್ಸ್​ ಮತ್ತು ರೌಡಿಸಂ ಮುಕ್ತ ನಗರವನ್ನಾಗಿಸುವುದೇ ನಮ್ಮ ಮೊದಲ ಆದ್ಯತೆ : ಡಿಜಿ ಐಜಿಪಿ ಅಲೋಕ್ ಮೋಹನ್

ಪ್ರಕೃತಿ ವಿಕೋಪದಿಂದ ಮನೆ-ಆಸ್ತಿ ಎಲ್ಲವೂ ನಷ್ಟ ಎನ್ನುತ್ತಿರುವ ಗುಂಪು: ಇನ್ನು ಜನರು ಮನಸ್ಸು ಕರಗಿ 10- 20 ರೂ.ಗಳನ್ನು ಕೊಟ್ಟರೆ ತೆಗೆದುಕೊಳ್ಳದೆ ತಮಗೆ 100-200 ರೂ. ನೆರವು ನೀಡುವಂತೆ ದುಂಬಾಲು ಬೀಳುತ್ತಾರೆ. ಯಾರಾದರೂ ಪ್ರಶ್ನೆ ಮಾಡಿದರೆ, ಕೆಲಸ ಕೊಡ್ತೀವಿ ಮಾಡ್ತೀರಾ ಎಂದು ಕೇಳಿದರೆ, ಅಲ್ಲಿಂದ ಓಡಿ ಹೋಗುತ್ತಿದ್ದಾರೆ. ರಾಜಸ್ಥಾನದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಮನೆ - ಆಸ್ತಿ ಎಲ್ಲವೂ ನಷ್ಟವಾಗಿದೆ. ಮನೆ ಬಿದ್ದು ಹೋಗಿದೆ. ನಿತ್ಯ ಬೆಳಗಾದರೆ ಧರಿಸೋದಕ್ಕೆ ಬಟ್ಟೆ ಇಲ್ಲ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದೇವೆ. ನೀವೇ ಧರ್ಮ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳುತ್ತಾರೆ.

ಒಂದೊಂದು ಸ್ಥಳದಲ್ಲಿ ಐವರು ಯುವತಿಯರ ಗುಂಪು ಭಿಕ್ಷಾಟನೆಗೆ ಮುಂದಾಗಿದ್ದಾರೆ. ಇನ್ನು ಅಲ್ಲಿ ಹಣ ಕೊಡುವವರಿಂದ ಹಣ ಪಡೆದು, ಪ್ರಶ್ನೆ ಮಾಡುವವರ ಸಂಖ್ಯೆ ಯಾವಾಗ ಹೆಚ್ಚಾಗುತ್ತದೆಯೋ ಆಗ ಅಲ್ಲಿಂದ ಆಟೋ ಹತ್ತಿಕೊಂಡು ಬೇರೆಡೆ ಹೋಗುತ್ತಿದ್ದಾರೆ.

ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ಮುಂದಿನ ಐದು ದಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ

Last Updated : May 25, 2023, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.